Dailyhunt Logo
  • Light mode
    Follow system
    Dark mode
    • Play Story
    • App Story
ರುತಬ್ರತಾ ಬಣದ ಹಿಡಿತಕ್ಕೆ ಟಿಎಂಸಿ ಕಚೇರಿ

ರುತಬ್ರತಾ ಬಣದ ಹಿಡಿತಕ್ಕೆ ಟಿಎಂಸಿ ಕಚೇರಿ

ಕೋಲ್ಕತ್ತ (ಪಿಟಿಐ): ವಿರೋಧ ಪಕ್ಷದ ನಾಯಕ ರುತಬ್ರತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಂಡಾಯ ಬಣವು ಕೋಲ್ಕತ್ತದಲ್ಲಿರುವ ಪಕ್ಷದ ಕೇಂದ್ರ ಕಚೇರಿ 'ತೃಣಮೂಲ ಭವನ'ವನ್ನು ಶುಕ್ರವಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಕಚೇರಿಯ ಬೀಗಗಳನ್ನು ಬದಲಿಸಿ ಹೊಸ ಪೋಸ್ಟರ್‌ಗಳನ್ನು ಅಳವಡಿಸಿರುವ ಬಂಡಾಯ ಬಣವು, ಇನ್ನು ಮುಂದೆ ಈ ಕಚೇರಿಯಿಂದಲೇ ಕಾರ್ಯನಿರ್ವಹಿಸುವುದಾಗಿ ಘೋಷಿಸಿದೆ.

ಇದರೊಂದಿಗೆ ಟಿಎಂಸಿ ಮೇಲೆ ಹಿಡಿತ ಸಾಧಿಸಲು ಮಮತಾ ಬ್ಯಾನರ್ಜಿ ಮತ್ತು ರುತಬ್ರತಾ ಮಧ್ಯೆ ನಡೆಯುತ್ತಿರುವ ಹೋರಾಟ ಇನ್ನಷ್ಟು ತೀವ್ರಗೊಂಡಿದೆ.

ರುತಬ್ರತಾ ಅವರು ಹಿರಿಯ ನಾಯಕರೊಂದಿಗೆ ಪಕ್ಷದ ಕೇಂದ್ರ ಕಚೇರಿಗೆ ಬಂದು ಸಭೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-2002511768

Dailyhunt
Disclaimer: This content has not been generated, created or edited by Dailyhunt. Publisher: Prajavani