ಹೊಸದುರ್ಗ: 'ಸಂಕಲ್ಪದೊಂದಿಗೆ ಸಾಧನೆಯ ದಾರಿಯಲ್ಲಿ ಸಾಗಿದರೆ ಗುರಿ ಮುಟ್ಟಲು ಸಾಧ್ಯ. ಇದಕ್ಕಾಗಿ ತಾಳ್ಮೆ ಮತ್ತು ಸತ್ಯದ ದಾರಿ ಇರಬೇಕು' ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಶಿವಕುಮಾರ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
'ನಂಬಿಕೆಯು ಕ್ರಮೇಣ ವಿಶ್ವಾಸವಾಗಿ ಬದಲಾಗಬೇಕು. ಅದು ಆತ್ಮವಿಶ್ವಾಸವಾಗುತ್ತದೆ. ಇದಕ್ಕಾಗಿ ಇಂದ್ರೀಯಗಳ ಮೇಲೆ ಹತೋಟಿ ಸಾಧಿಸಿದರೆ ಸಾಧನೆ ಪಥದಲ್ಲಿ ಹೆಜ್ಜೆ ಇಡಲು ಸಾಧ್ಯ. ಸಮಸ್ಯೆಗಳು ಎದುರಾದಾಗ ತಾಳ್ಮೆಯಿಂದ ಎದುರಿಸುವೆ ಎನ್ನುವ ವಿಶ್ವಾಸ ಬೇಕು' ಎಂದರು.
'ಜೀವನದಲ್ಲಿ ಬಡತನ ಸೋಲು ಹಾಗೂ ಕಷ್ಟಗಳು ಎದುರಾದರೂ ಆತ್ಮವಿಶ್ವಾಸ ಕುಗ್ಗಬಾರದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೋಸ, ಅನ್ಯಾಯ, ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಸತ್ಯ, ನ್ಯಾಯ ಹಾಗೂ ಧರ್ಮದ ಮಾರ್ಗದಲ್ಲಿ ಸಾಗಬೇಕು. ಜೀವನದಲ್ಲಿ ಸೋಲು ಎದುರಾದಾಗ ಧೃತಿಗೆಡದೆ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು' ಎಂದು ಉಪನ್ಯಾಸಕ ಎಸ್. ಸುರೇಶ್ ಹೇಳಿದರು.
ಕ್ರಾಂತಿಕಾರಿ ಬದಲಾವಣೆ
ತಂತ್ರಜ್ಞಾನದ ಯುಗದಲ್ಲಿ ಹವ್ಯಾಸಿ ನಾಟಕ ಕಲೆ ನಶಿಸುತ್ತಿದೆ. ಪಂಡಿತಾರಾಧ್ಯ ಶ್ರೀಗಳು ಶಿವಸಂಚಾರ ನಾಟಕಗಳ ಮೂಲಕ ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದ್ದಾರೆ. ಸ್ಥಳೀಯ ಪ್ರತಿಭೆಗಳ ಮೂಲಕ ಜನರಿಗೆ ಮೌಲ್ಯಗಳನ್ನು ತಿಳಿಸುತ್ತಿದ್ದಾರೆ. ಅಸಾಧ್ಯವಾದುದನ್ನು ಯಶಸ್ವಿಯಾಗಿ ಸಾಧಿಸುತ್ತಿದ್ದಾರೆ. ಸಾಣೇಹಳ್ಳಿ ಇನ್ನಷ್ಟು ಅಭಿವೃದ್ಧಿಯಾಗಲಿ. ಶ್ರೀಗಳ ಪ್ರತಿ ಕಾಯಕವೂ ಮೆಚ್ಚುವಂಥದ್ದು ಎಂದು ಬ್ಯಾಡಗಿ ಪಂಚಕಮಿಟಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ್ ತಿಳಿಸಿದರು.
'ಮೂಢನಂಬಿಕೆಗಳ ವಿರುದ್ಧ ಧ್ವನಿ'
'ಪಂಡಿತಾರಾಧ್ಯ ಶ್ರೀಗಳು ಹಲವು ಮಾಧ್ಯಮಗಳ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾಟಕ, ಆಶೀರ್ವಚನ, ಶರಣ ಸಂಸ್ಕೃತಿ ಉತ್ಸವ, ಕಲ್ಯಾಣ, ವಚನ ನೃತ್ಯ ಸೇರಿದಂತೆ ವಿವಿಧ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮೂಡನಂಬಿಕೆಗಳ ವಿರುದ್ಧ ಗಟ್ಟಿ ಧ್ವನಿಯಾಗಿ, ವಿವಿಧ ಮಠಾಧೀಶರಿಗೆ ಮಾರ್ಗದರ್ಶಕರಾಗಿದ್ದಾರೆ. ಶ್ರೀಗಳು ಸಂನ್ಯಾಸತ್ವ ಸ್ವೀಕರಿಸಿ 50 ವರ್ಷಗಳಾಗಿದ್ದು, ಅವರಿಗೆ ಈಗ 75 ವರ್ಷವಾಗಿರುವ ಕಾರಣ ಈ ಬಾರಿಯ ನಾಟಕೋತ್ಸವ ವಿಶೇಷವಾಗಿದೆ' ಎಂದು ಶಿವಮೊಗ್ಗದ ಉದ್ಯಮಿ ಎಸ್. ರುದ್ರೇಗೌಡರು ತಿಳಿಸಿದರು.
ನಾಟಕೋತ್ಸವದಲ್ಲಿ ಇಂದು
'ಹೈನುಗಾರಿಕೆ' ವಿಚಾರ ಸಂಕಿರಣ: ಸಾನ್ನಿಧ್ಯ- ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ, ವಿಷಯ: ಹೈನುಗಾರಿಕೆ ಮತ್ತು ಸ್ವಯಂ ಉದ್ಯೋಗ, ಹಾರನಹಳ್ಳಿ ಪಶುವೈದ್ಯಾಧಿಕಾರಿ ಟಿ.ವಿ ಗಿರೀಶ್
ವಿಷಯ: 'ಅಮೃತ ಕರೆವ ಹಸುಗಳಿಗೆ ವೈಜ್ಞಾನಿಕ ಆಹಾರ ಪೂರೈಕೆ' ಪ್ರಾಣಿ ಆಹಾರ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಜಿ.ಯು. ಮಂಜು, 'ರಸಮೇವು ಉತ್ಪಾದನೆ ಮತ್ತು ಬಳಕೆಯ ಮಹತ್ವ' ಎಂ.ಎಂ. ಸೈಲೋ ಆಗ್ರೋ ಇಂಡಸ್ಟ್ರೀಸ್‌ನ ಕೆ.ಎಸ್. ಮಧುಕೇಶ್ವರ, 'ಕೆಚ್ಚಲುಬಾವು ತಡೆಗೆ ಮುಂಜಾಗ್ರತಾ ಕ್ರಮಗಳು' ಮುಖ್ಯ ಪಶುವೈದ್ಯಾಧಿಕಾರಿ ಬಿ.ಎಂ. ಮಹಾದೇವ ಶರ್ಮಾಸ್ಥಳ: ಎಸ್.ಎಸ್. ಒಳಾಂಗಣ ರಂಗಮಂದಿರ, ಸಾಣೇಹಳ್ಳಿ, ಬೆಳಿಗ್ಗೆ 11ಕ್ಕೆ
ಪಶು ತಪಾಸಣೆ ಮತ್ತು ಚಿಕಿತ್ಸೆ: ಸ್ಥಳ: ಎಸ್.ಡಿ. ಸಿದ್ಧರಾಮಯ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ ಸಾಣೇಹಳ್ಳಿ ಸಮಯ: ಬೆಳಿಗ್ಗೆ 8ರಿಂದ 11 ಗಂಟೆ
ಸಾನ್ನಿಧ್ಯ: ಬಂಗಾರಿಮಕ್ಕಿ ಧರ್ಮಾಧಿಕಾರಿ ಮಾರುತಿ ಗುರೂಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ
ಉಪನ್ಯಾಸ: 'ಪರಿಸರದ ಸವಾಲುಗಳು' ಪರಿಸರ ಬರಹಗಾರ ಅಖಿಲೇಶ್ ಚಿಪ್ಳಿ
ಅತಿಥಿಗಳು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬಿಜೆಪಿ ರಾಜ್ಯಾ ಘಟಕದ ಸಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಶಾಸಕ ಜಿ.ಎಚ್. ಶ್ರೀನಿವಾಸ, ಜಿಲ್ಲಾಧಿಕಾರಿ ಎಸ್. ರಮ್ಯಾ, ಬ್ಯಾಡಗಿ ಪಂಚಕಮಿಟಿ ಉಪಾಧ್ಯಕ್ಷ ಎಸ್. ಆರ್. ಪಾಟೀಲ್, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ. ವಿರೂಪಾಕ್ಷ, ರಾಜ್ಯ ಗೃಹ ನಿರ್ಮಾಣ ಮಂಡಳಿ ಆಯುಕ್ತ ಕೆ.ಎ. ದಯಾನಂದ, ದಾವಣಗೆರೆ ಸಿಂಡಿಕೇಟ್ ಸದಸ್ಯ ಶಾಂತಕುಮಾರ್, ಮಾಜಿ ಶಾಸಕ ಪಿ. ರಮೇಶ್
ನಾಟಕ: ಶಶಿರಾಜ್ ರಾವ್ ಕಾವೂರು ರಚನೆಯ 'ಬರ್ಬರೀಕ' ನಾಟಕವನ್ನು ಶಿವಸಂಚಾರ-26 ತಂಡದಿಂದಸ್ಥಳ: ಸಾಣೇಹಳ್ಳಿ ಬಯಲು ರಂಗಮಂದಿರ, ಸಂಜೆ 6ಕ್ಕೆ

261104-44-75831702

