Dailyhunt Logo
  • Light mode
    Follow system
    Dark mode
    • Play Story
    • App Story
ಸಹಕಾರ ಸಂಸ್ಥೆಗಳು ಆರ್ಥಿಕತೆಯ ಬೆನ್ನೆಲುಬು

ಸಹಕಾರ ಸಂಸ್ಥೆಗಳು ಆರ್ಥಿಕತೆಯ ಬೆನ್ನೆಲುಬು

ಸುರಪುರ: 'ಸಹಕಾರ ಸಂಸ್ಥೆಗಳು ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರು, ಮಹಿಳೆಯರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸ್ವಾವಲಂಬನೆಗೆ ಮಹತ್ತರ ಕೊಡುಗೆ ನೀಡುತ್ತಿವೆ. ಪಾರದರ್ಶಕ ಆಡಳಿತ ಮತ್ತು ಸದಸ್ಯರ ಸಕ್ರಿಯ ಸಹಭಾಗಿತ್ವದಿಂದ ಸಹಕಾರ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗುತ್ತಿದೆ' ಎಂದು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ್ ಹೇಳಿದರು.

ಇಲ್ಲಿನ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜಿಲ್ಲಾ ಸಹಕಾರಿ ಒಕ್ಕೂಟ ಯೂನಿಯನ್, ಸಹಕಾರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಜಂಟಿ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಹಕಾರ ಸಮೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ ಶಹಾಪುರ, ನಿದೇರ್ಶಕರಾದ ರಾಜಾ ಮುಕುಂದನಾಯಕ, ಶಾಂತರೆಡ್ಡಿ ಚೌದ್ರಿ ಮುದನೂರ, ಪ್ರಕಾಶ ಅಂಗಡಿ ಕನ್ನೆಳ್ಳಿ ಅವರು ಸಹಕಾರ ಕ್ಷೇತ್ರದ ಕುರಿತು ಮಾತನಾಡಿದರು.

ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೀರೇಶ ನಿಷ್ಠಿ ದೇಶಮುಖ, ಹಿರಿಯ ಸಹಕಾರಿ ಬಸವರಾಜ ಜಮದ್ರಖಾನಿ, ಸಹಕಾರ ಇಲಾಖೆಯ ಅಧಿಕಾರಿ ರವಿಕುಮಾರ ವೇದಿಕೆಯಲ್ಲಿದ್ದರು.

ಸಹಕಾರ ಸಮೃದ್ಧಿ ಕಾರ್ಯಕ್ರಮ ನಿಮಿತ್ತ ಅಂಗನವಾಡಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಪ್ರಮುಖರಾದ ರವೀಂದ್ರ ಅಂಗಡಿ ಕೊಡೇಕಲ್, ಹೊನ್ನಪ್ಪ ದೇಸಾಯಿ ಹುಣಸಗಿ, ಸಂಗನಗೌಡ ಪಾಟೀಲ ರೊಟ್ನಡಗಿ, ವಿಶ್ವರಾಧ್ಯ ಸತ್ಯಂಪೇಟೆ, ಶಿವಶರಣಪ್ಪ ಹೆಡಗಿನಾಳ, ಮಂಜುನಾಥ ಜಾಲಹಳ್ಳಿ, ವೀರಭದ್ರಪ್ಪ ಸತ್ಯಂಪೇಟೆ, ವಿಜಯಕುಮಾರ ಬಂಡಳ್ಳಿ, ಪ್ರಶಾಂತ ಹಿರೇಮಠ, ವೀರೇಶ ಪಂಚಾಂಗಮಠ, ಡಿ.ಸಿ. ಪಾಟೀಲ, ಶರಣಬಸವ ಹೂಗಾರ, ಸಿದ್ದನಗೌಡ ಹೆಬ್ಬಾಳ ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರಿ ಶಿಕ್ಷಕಿ ಸುಜಾತಾ ಮಠ ನಿರೂಪಿಸಿದರು. ವೀರಪ್ಪಗೌಡ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-30-85243530

Dailyhunt
Disclaimer: This content has not been generated, created or edited by Dailyhunt. Publisher: Prajavani