Dailyhunt Logo
  • Light mode
    Follow system
    Dark mode
    • Play Story
    • App Story
ಸೈನಿಕರ ಹತ್ಯೆಗೆ ಪ್ರತೀಕಾರ: ಇರಾನ್‌ ಪಡೆಗಳ ಮೇಲೆ ದಾಳಿ ತೀವ್ರಗೊಳಿಸಿದ ಅಮೆರಿಕ

ಸೈನಿಕರ ಹತ್ಯೆಗೆ ಪ್ರತೀಕಾರ: ಇರಾನ್‌ ಪಡೆಗಳ ಮೇಲೆ ದಾಳಿ ತೀವ್ರಗೊಳಿಸಿದ ಅಮೆರಿಕ

ದುಬೈ: ಇರಾನ್‌ನ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್ ಗುರಿಯಾಗಿಸಿ ಅಮೆರಿಕ ಸೇನೆ ಭಾನುವಾರ ವೈಮಾನಿಕ ದಾಳಿ ನಡೆಸಿದೆ. ಜೋರ್ಡನ್‌ನಲ್ಲಿ ಅಮೆರಿಕದ ಸೈನಿಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ದಾಳಿಯನ್ನು ತೀವ್ರಗೊಳಿಸಿದೆ.

ಇರಾನ್‌ನ ಕರಾವಳಿ ಕಣ್ಗಾವಲು ಮತ್ತು ವಾಯುರಕ್ಷಣಾ ನೆಲೆಗಳು ಹಾಗೂ ಕ್ಷಿಪಣಿಗಳು, ಡ್ರೋನ್‌ ಉಗ್ರಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆಯ ಕೇಂದ್ರೀಯ ಕಮಾಂಡ್‌ ತಿಳಿಸಿದೆ.

ಹೊರ್ಮುಜ್‌ ಜಲಸಂಧಿಯ ನಿಯಂತ್ರಣದ ವಿಚಾರವಾಗಿ ಉಭಯ ದೇಶಗಳು ಕಳೆದ ಎಂಟು ದಿನಗಳಿಂದ ದಾಳಿ-ಪ್ರತಿದಾಳಿಯನ್ನು ತೀವ್ರಗೊಳಿಸಿವೆ. ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್‌ ದಾಳಿ ನಡೆಸುತ್ತಿದೆ. ಇರಾನ್‌ನ ಸೇತುವೆಗಳು, ವಿದ್ಯುತ್‌ ಮೂಲಸೌಕರ್ಯಗಳು ಮತ್ತು ಟವರ್‌ಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸುತ್ತಿದೆ.

'ಕುವೈತ್‌ ಮೇಲೆ ಭಾನುವಾರವೂ ಇರಾನ್‌ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ದೇಶದ ವಾಯುರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ' ಎಂದು ಕುವೈತ್‌ ತಿಳಿಸಿದೆ.

ಜೋರ್ಡನ್‌ನಲ್ಲಿ ಇರಾನ್‌ ನಡೆಸಿದ ದಾಳಿಯಿಂದ ಅಮೆರಿಕದ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ, ಒಬ್ಬರು ನಾಪತ್ತೆಯಾಗಿದ್ದಾರೆ ಮತ್ತು ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಉಭಯ ದೇಶಗಳ ಮಧ್ಯೆ ಯುದ್ಧ ಆರಂಭವಾದಾಗಿನಿಂದ ಅಮೆರಿಕದ 16 ಸೈನಿಕರು ಮೃತಪಟ್ಟಿದ್ದು, 430 ಮಂದಿ ಗಾಯಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani