Dailyhunt Logo
  • Light mode
    Follow system
    Dark mode
    • Play Story
    • App Story
ಸಕಲೇಶಪುರದಲ್ಲಿ ಹಲ್ಲೆ, ಬೆದರಿಕೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ದಂಡ

ಸಕಲೇಶಪುರದಲ್ಲಿ ಹಲ್ಲೆ, ಬೆದರಿಕೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ದಂಡ

ಸಕಲೇಶಪುರ: ವನಗೂರು ಕೂಡುರಸ್ತೆಯ ಮರಳು ತನಿಖಾ ಠಾಣೆ ಸಮೀಪ 2023ರ ಫೆಬ್ರವರಿ 12ರಂದು ರಾತ್ರಿ ರೂಪೇಶ್ೆ .ವಿ. ಎಂಬುವವರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಇಲ್ಲಿಯ ಹಿರಿಯ ಸಿವಿಲ್‌ ನ್ಯಾಯಾಧೀಶ ದಂಡ ವಿಧಿಸಿದ್ದಾರೆ.

ಯಸಳೂರು ಹೋಬಳಿಯ ಟಿ.ಸಿ. ತರುಣ್, ಮಹೇಶ, ಗಗನ್ ಮತ್ತು ನಿಶಾಂತ್ ಎಂಬುವವರು ರೂಪೇಶ್ ಅವರ ವಾಹನ ಅಡ್ಡಗಟ್ಟಿ, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದರು ಎಂಬ ದೂರಿನ ಸಂಬಂಧ ಯಸಳೂರು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

ನ್ಯಾಯಾಧೀಶೆ ಕೆ.ಎಸ್‌. ಶೃತಿ ಅವರು ನಾಲ್ವರು ಅಪರಾಧಿಗಳಿಗೆ ತಲಾ ₹25,000 ದಂಡ ವಿಧಿಿಸಿ, ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಜಾಮೀನು ಭದ್ರತೆ ಪಡೆದು, ಒಂದು ವರ್ಷದ ಪರಿವೀಕ್ಷಣಾ ಅವಧಿಯ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗೋಪಾಲಕೃಷ್ಣ ಅವರು ವಾದ ಮಂಡಿಸಿದ್ದರು.

261104-36-2063099622

Dailyhunt
Disclaimer: This content has not been generated, created or edited by Dailyhunt. Publisher: Prajavani