Monday, 07 May, 1.25 am ಪ್ರಜಾವಾಣಿ

ರಾಷ್ಟ್ರೀಯ
ಸಲ್ಮಾನ್‌ ಅರ್ಜಿ ವಿಚಾರಣೆ ಇಂದು

ಜೈಪುರ: ಕೃಷ್ಣ ಮೃಗಗಳ ಹತ್ಯೆ ಪ್ರಕರಣದಲ್ಲಿ ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ರದ್ದುಪಡಿಸಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಜೋಧ್‌ಪುರ ನ್ಯಾಯಾಲಯ ಮೇ 7ರ ಸೋಮವಾರ ನಡೆಸಲಿದೆ.

19 ವರ್ಷಗಳ ಹಿಂದೆ ಎರಡು ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್‌ಖಾನ್‌ ದೋಷಿ ಎಂದು ಘೋಷಿಸಿದ್ದ ಕೋರ್ಟ್‌, ಐದು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಮಾನ್‌ಖಾನ್‌ ಪರ ವಕೀಲರು ಜೋಧ್‌ಪುರ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಜೋಧ್‌ಪುರಕ್ಕೆ ಸಲ್ಮಾನ್‌: ಶಿಕ್ಷೆ ವಿಧಿಸಿ ಕೋರ್ಟ್‌ ತೀರ್ಪು ನೀಡಿದ ನಂತರ ಜಾಮೀನು ಪಡೆದಿದ್ದ ಸಲ್ಮಾನ್‌ಖಾನ್‌, ಶಿಕ್ಷೆ ರದ್ದತಿ ಕೋರಿ ಸಲ್ಲಿಸಿದ್ದ ತಮ್ಮ ಮೇಲ್ಮನವಿ ವಿಚಾರಣೆ ಸಂಬಂಧ ಕೋರ್ಟ್‌ಗೆ ಹಾಜರಾಗಲು ಭಾನುವಾರ ಜೋಧ್‌ಪುರಕ್ಕೆ ಬಂದಿಳಿದರು.

ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಅವರೊಂದಿಗೆ ಖಾಸಗಿ ವಿಮಾನದಲ್ಲಿ ಬಂದಿಳಿದ ನಟ ಸಲ್ಮಾನ್‌ಖಾನ್‌ ನೋಡಲು ಜೋಧ್‌ಪುರ ವಿಮಾನ ನಿಲ್ದಾಣದ ಬಳಿ ಅಭಿಮಾನಿಗಳು ನೆರೆದಿದ್ದರು.

Dailyhunt
Top