Dailyhunt Logo
  • Light mode
    Follow system
    Dark mode
    • Play Story
    • App Story
Sandalwood: ಕಥೆಗಳನ್ನು ಆಹ್ವಾನಿಸಿದ 'ಸುಪ್ರಿಯಾನ್ವಿ'

Sandalwood: ಕಥೆಗಳನ್ನು ಆಹ್ವಾನಿಸಿದ 'ಸುಪ್ರಿಯಾನ್ವಿ'

ನಟ ಸುದೀಪ್‌ ಅವರ ಪತ್ನಿ ಪ್ರಿಯಾ ಇತ್ತೀಚೆಗಷ್ಟೇ 'ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೊ' ಅನಾವರಣಗೊಳಿಸಿದ್ದರು. ಇದೀಗ ಕಥೆಗಾರರಿಂದ ಕಥೆಗಳನ್ನು ಆಹ್ವಾನಿಸಲಾಗಿದೆ.

ಈ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಪ್ರಿಯಾ ಸುದೀಪ್‌ ಮುಂದಾಗಿದ್ದಾರೆ. 'ಮೌಲಿಕವಾದ ಕಥೆ, ಚಿತ್ರಕಥೆ ಅಥವಾ ವಿಶಿಷ್ಟವಾದ ಕಥಾ ಪರಿಕಲ್ಪನೆ ಇದ್ದರೆ ಅದನ್ನು ಹಂಚಿಕೊಳ್ಳಿ' ಎಂಬ ಆಹ್ವಾನ ನೀಡಿದ್ದಾರೆ.

'ಮಾರ್ಕ್‌' ಸಿನಿಮಾ ಮೂಲಕ ವಿತರಣೆ ಕ್ಷೇತ್ರಕ್ಕೆ ಕಾಲಿಟ್ಟಿರುವ ಪ್ರಿಯಾ ಅವರು ಇತ್ತೀಚೆಗೆ 'ಮ್ಯಾಂಗೋ ಪಚ್ಚ' ಸಿನಿಮಾವನ್ನು ಕೆಆರ್‌ಜಿ ಸಂಸ್ಥೆ ಜೊತೆಗೂಡಿ ನಿರ್ಮಾಣ ಮಾಡಿದ್ದರು. ಇದರ ಬೆನ್ನಲ್ಲೇ ಹೊಸ ಕಥೆಗಳ ಹುಡುಕಾಟ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 6363307434ಗೆ ವಾಟ್ಸ್‌ಆಯಪ್‌ ಮಾಡಲು ನಿರ್ಮಾಣ ಸಂಸ್ಥೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-51-23734627

Dailyhunt
Disclaimer: This content has not been generated, created or edited by Dailyhunt. Publisher: Prajavani