Dailyhunt Logo
  • Light mode
    Follow system
    Dark mode
    • Play Story
    • App Story
Sandalwood: ಪ್ರೇಮಂ ಜೋಡಿಯ ಹೊಸ ಸಿನಿಮಾ 'ವಿಜಯಂ'

Sandalwood: ಪ್ರೇಮಂ ಜೋಡಿಯ ಹೊಸ ಸಿನಿಮಾ 'ವಿಜಯಂ'

ಮಲಯಾಳದ 'ಪ್ರೇಮಂ' ನಿವಿನ್‌ ಪೌಲಿ ಅವರ ಸಿನಿ ಪಯಣಕ್ಕೆ ಹೊಸ ತಿರುವು ನೀಡಿದ್ದ ಸಿನಿಮಾ. ಆ ಸಿನಿಮಾದ ನಿರ್ದೇಶಕ ಆಲ್ಫೋನ್ಸ್‌ ಪುತ್ರೇನ್‌ ಜೊತೆ ಮತ್ತೊಂದು ಸಿನಿಮಾಗೆ ನಿವಿನ್‌ ಸಜ್ಜಾಗಿದ್ದಾರೆ.

ನಿವಿನ್‌ 50ನೇ ಸಿನಿಮಾವನ್ನು ಆಲ್ಫೋನ್ಸ್‌ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ 'ವಿಜಯಂ' ಎನ್ನುವ ಶೀರ್ಷಿಕೆ ಇಡಲಾಗಿದೆ.

12 ವರ್ಷಗಳ ನಂತರ ನಿವಿನ್‌-ಆಲ್ಫೋನ್ಸ್‌ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಬರುತ್ತಿದೆ. 'ಪ್ರೇಮಂ'ಗೂ ಮುನ್ನ 'ನೇರಂ' ಎನ್ನುವ ಸಿನಿಮಾವನ್ನು ಆಲ್ಫೋನ್ಸ್‌ ನಿರ್ದೇಶಿಸಿದ್ದರು. ಇದರಲ್ಲೂ ನಿವಿನ್‌ ಮುಖ್ಯಭೂಮಿಕೆಯಲ್ಲಿದ್ದರು. ರೇಸಿಂಗ್ ಪ್ರಪಂಚದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರಕ್ಕೆ ಆಲ್ಫೋನ್ಸ್ ಪುತ್ರೇನ್ ಕಥೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿಯೂ ಅವರದ್ದೇ. ಚಿತ್ರವನ್ನು ಪೌಲಿ ಜೂನಿಯರ್ ಪಿಕ್ಚರ್ಸ್ ಜೊತೆಗೆ ಸಿನಿಹೋಲಿಕ್ಸ್ ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಮತ್ತು ಸುನಿಲ್ ರಾಮದಿ ನಿರ್ಮಾಣ ಮಾಡುತ್ತಿದ್ದಾರೆ.

ಸ್ಟೀವ್ ಕೊಟ್ಟೂರ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಾಗುವುದು ಎಂದಿದೆ ಚಿತ್ರತಂಡ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-51-450634681

Dailyhunt
Disclaimer: This content has not been generated, created or edited by Dailyhunt. Publisher: Prajavani