ಬೆಳಗಾವಿ: 'ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ವ್ಯಕ್ತಿಯೊಬ್ಬರಲ್ಲಿ ಅಪಾಯಕಾರಿ ಶಿಲೀಂಧ್ರ ಸೋಂಕು (ಬ್ಲ್ಯಾಕ್ ಫಂಗಸ್) ಪತ್ತೆಯಾಗಿದೆ' ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ ತಿಳಿಸಿದರು.
'ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೋವಿಡ್ ಜೊತೆಗೆ ಶಿಲೀಂಧ್ರ ಸೋಂಕು ಕೂಡ ಬಾಧಿಸುತ್ತಿರುವುದು ಆತಂಕ ಮೂಡಿಸಿದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಆರೋಪಗಳಲ್ಲಿ ತೊಡಗುವ ಬದಲಿಗೆ ಜವಾಬ್ದಾರಿಯಿಂದ ವರ್ತಿಸಬೇಕು' ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಕೋರಿದರು.
Covid-19: ಸಂಕಷ್ಟದಲ್ಲಿರುವವರಿಗೆ ಬಿಜೆಪಿ ಸಹಾಯಹಸ್ತ
'ಬ್ಲ್ಯಾಕ್ ಫಂಗಸ್ ಸಮಸ್ಯೆ ಗಂಭೀರವಾದುದೇನಲ್ಲ.

