ಹುಕ್ಕೇರಿ: 'ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರಗಳು ಶಾಲಾ ಕಾಲೇಜು ಪ್ರಾರಂಭಿಸಿದ್ದು, ಪಾಲಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು' ಎಂದು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಉಪಾಧ್ಯಕ್ಷ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಸತ್ಯಪ್ಪ ನಾಯಿಕ ಹೇಳಿದರು.
ಶನಿವಾರ ತಾಲ್ಲೂಕಿನ ಬೆಳವಿ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ 2026-27ನೇ ಸಾಲಿನ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
'ಕೊಠಡಿಗಳ ಕೊರತೆಯನ್ನು ಶಾಸಕರ ಗಮನಕ್ಕೆ ತರಲಾಗಿದ್ದು, ಮೂಲಸೌಲಭ್ಯಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು ಎಂದ ಅವರು ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತರಬೇಕು' ಎಂದರು.
ಮುಖ್ಯ ಅತಿಥಿ ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ್ ಉಪನ್ಯಾಸ ನೀಡಿದರು. ಪ್ರೊ.ಬಸವರಾಜ ಹಂಚಿನಾಳ ಮಾತನಾಡಿದರು. ಪ್ರಾಚಾರ್ಯ ಸುಭಾಸ ಶಿರಗಾಂವಕರ್ ಪ್ರಾಸ್ತಾವಿಕ ಮಾತನಾಡಿದರು.
ಕಾಲೇಜಿನ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರೊ.ಸಂದೀಪ ದುರದುಂಡಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಿಡಿಸಿ ಸದಸ್ಯರಾದ ರಾಜು ನಿಂಗನೂರೆ, ಶಿವಶಂಕರ ಹಾರೂಗೇರಿ, ಹಿರಾ ಶುಗರ್ಸ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ, ಮುಖಂಡರಾದ ಮಹಾದೇವ ನಾಯಿಕ, ವಿಶ್ವನಾಥ ನಾಯಿಕ, ಸಂಜೀವ ಚಿಕ್ಕೋಡಿ, ಶಿವನಾಯ್ಕ ನಾಯಿಕ, ಉಪನ್ಯಾಸಕರಾದ ಅಪ್ಪಾಸಾಬ ಮಲ್ಲಾರಿಗೋಳ, ಪ್ರೊ.ನಿಂಗಪ್ಪ ಕೋಡಿ, ಪ್ರೊ ಸುನಿತಾ ಸಾರಾಪುರೆ, ಸಾನಿಯಾ ಅಮ್ಮಣಗಿ ಮತ್ತು ಸಾನಿಯಾ ಮಕಾನದಾರ,ಸಾವಿತ್ರಿ ಕೊಟಗಿ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-21-137902656

