ಇಂಫಾಲ್ (ಪಿಟಿಐ): ಕುಕಿ ಸಮುದಾಯದ ಇಬ್ಬರು ಯುವಕರ ಹತ್ಯೆ ಖಂಡಿಸಿ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಬಂದ್ ಆಚರಿಸಲಾಯಿತು. ಜಿಲ್ಲೆಯ ಎಲ್ಲ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಸರಕುಗಳನ್ನು ತುಂಬಿ ಇಂಫಾಲ್‌ಗೆ ಹೊರಟಿದ್ದ ಹಲವು ವಾಹನಗಳು ಕಾಂಗ್‌ಪೋಕ್ಪಿ ಜಿಲ್ಲೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಳೆದೆರಡು ದಿನದಿಂದಲೂ ಸೇನಾಪತಿಯಲ್ಲಿಯೇ ಉಳಿದಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯುವಕರ ಸಾವಿನ ಬಳಿಕ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬುಡಕಟ್ಟು ಏಕತಾ ಸಮಿತಿ ಜಿಲ್ಲಾ ಬಂದ್‌ಗೆ ಕರೆ ನೀಡಿತ್ತು.
261104-51-920735336

