Friday, 07 May, 7.00 pm ಪ್ರಜಾವಾಣಿ

ವಾಣಿಜ್ಯ ಸುದ್ದಿ
ಸತತ ನಾಲ್ಕನೆಯ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

ನವದೆಹಲಿ: ಸತತ ನಾಲ್ಕನೆಯ ದಿನವೂ ಪಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ರಾಜಸ್ಥಾನದ ಕೆಲವೆಡೆ ಲೀಟರ್ ಪೆಟ್ರೋಲ್ ಬೆಲೆ ₹ 102ರ ಗಡಿ ದಾಟಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 29 ಪೈಸೆ ಹೆಚ್ಚಳವಾಗಿ ₹ 94.30ಗೆ ತಲುಪಿದೆ. ಡೀಸೆಲ್ ಬೆಲೆಯು 33 ಪೈಸೆಯಷ್ಟು ಜಾಸ್ತಿ ಆಗಿ, ಲೀಟರ್‌ಗೆ ₹ 86.64ಕ್ಕೆ ತಲುಪಿದೆ. ನಾಲ್ಕು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ 88 ಪೈಸೆಯಷ್ಟು, ಡೀಸೆಲ್ ಬೆಲೆ ₹ 1ರಷ್ಟು ಜಾಸ್ತಿ ಆಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top