Dailyhunt Logo
  • Light mode
    Follow system
    Dark mode
    • Play Story
    • App Story
ಸೆನ್ಸೆಕ್ಸ್ 1,233 ಅಂಶ ಏರಿಕೆ

ಸೆನ್ಸೆಕ್ಸ್ 1,233 ಅಂಶ ಏರಿಕೆ

ಮುಂಬೈ (ಪಿಟಿಐ): ಕಚ್ಚಾ ತೈಲ ದರ ಇಳಿಕೆ, ವಿದೇಶಿ ಬಂಡವಾಳದ ಒಳಹರಿವಿನಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,233 ಅಂಶ ಹೆಚ್ಚಳವಾಗಿ, 75,692ಕ್ಕೆ ವಹಿವಾಟು ಅಂತ್ಯ ಗೊಂಡಿದೆ. ಇದು ಏಳು ವಾರದ ಗರಿಷ್ಠ ಮಟ್ಟವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 387 ಅಂಶ ಏರಿಕೆಯಾಗಿ, 23,440ಕ್ಕೆ ಕೊನೆಗೊಂಡಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉತ್ತಮ ಗಳಿಕೆ ಕಂಡಿದೆ. ಇದು ಸಹ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ.

ಟಾಟಾ ಸ್ಟೀಲ್‌, ಅಲ್ಟ್ರಾಟೆಕ್ ಸಿಮೆಂಟ್, ಎಸ್‌ಬಿಐ, ಎನ್‌ಟಿಪಿಸಿ, ಮಾರುತಿ ಸುಜುಕಿಯ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ. ಇನ್ಫೊಸಿಸ್, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಸನ್‌ ಫಾರ್ಮಾದ ಷೇರಿನ ಮೌಲ್ಯ ಕಡಿಮೆ ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 4.46ರಷ್ಟು ಕಡಿಮೆಯಾಗಿ, ಪ್ರತಿ ಬ್ಯಾರಲ್ ಬೆಲೆಯು 108.7 ಡಾಲರ್‌ಗೆ ಇಳಿದಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿಕಂಪನಿಗಳ ಗಳಿಕೆ, ಪ್ರಯಾಣಿಕ ವಾಹನಗಳ ಮಾರಾಟದಲ್ಲಿನ ಹೆಚ್ಚಳ, ಜಿಎಸ್‌ಟಿ ವರಮಾನದಲ್ಲಿನ ಏರಿಕೆಯು ಸೂಚ್ಯಂಕಗಳ ಏರಿಕೆಗೆ ನೆರವಾದವು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

'ವಿದೇಶಿ ಹೂಡಿಕೆದಾರರು ದೇಶದ ಷೇರುಗಳ ಖರೀದಿಗೆ ಮುಂದಾಗಿರುವುದು, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಬಿಕ್ಕಟ್ಟು ಕಡಿಮೆ ಆಗುತ್ತಿರುವುದು, ಕಚ್ಚಾ ತೈಲ ದರ ಇಳಿಕೆಯು ಸೂಚ್ಯಂಕಗಳ ಏರಿಕೆಗೆ ಕಾರಣವಾದವು' ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ರಿಲಯನ್ಸ್ ಎಂ-ಕ್ಯಾಪ್ ಹೆಚ್ಚಳ

ನವದೆಹಲಿ (ಪಿಟಿಐ): ರಿಲಯನ್ಸ್ ಇಂಡಸ್ಟ್ರೀಸ್‌ ಷೇರಿನ ಮೌಲ್ಯ ಸೋಮವಾರದ ವಹಿವಾಟಿನಲ್ಲಿ ಶೇ 12ರವರೆಗೆ ಏರಿಕೆ ಆಗಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ (ಎಂ-ಕ್ಯಾಪ್) ಒಂದೇ ದಿನ ₹1.83 ಲಕ್ಷ ಕೋಟಿ ಸೇರ್ಪಡೆ ಆಗಿದೆ. ಕಂಪನಿಯ ಒಟ್ಟು ಎಂ-ಕ್ಯಾಪ್ ₹17.57 ಲಕ್ಷ ಕೋಟಿ ದಾಟಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಾಭದಲ್ಲಿ ಶೇ 33ರಷ್ಟು ಹೆಚ್ಚಳವಾಗಿದ್ದು, ₹29,550 ಕೋಟಿ ಲಾಭ ಗಳಿಸಿದೆ. ಇದು ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು.

261103-51-370688803

Dailyhunt
Disclaimer: This content has not been generated, created or edited by Dailyhunt. Publisher: Prajavani