Dailyhunt Logo
  • Light mode
    Follow system
    Dark mode
    • Play Story
    • App Story
ಸೆಷಲ್ಸ್ ನಾಯಕರಿಗೆ ಬಿದರಿಕಲೆಯ ಪೆಟ್ಟಿಗೆ, ಕಸೂತಿ ಶಾಲು ಉಡುಗೊರೆ ನೀಡಿದ ಮೋದಿ

ಸೆಷಲ್ಸ್ ನಾಯಕರಿಗೆ ಬಿದರಿಕಲೆಯ ಪೆಟ್ಟಿಗೆ, ಕಸೂತಿ ಶಾಲು ಉಡುಗೊರೆ ನೀಡಿದ ಮೋದಿ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭೇಟಿ ನೀಡಿದ್ದ ಸೆಷಲ್ಸ್‌ನ ನಾಯಕರಿಗೆ ಮತ್ತು ಅವರ ಸಂಗಾತಿಗಳಿಗೆ ಬಿದರಿಕಲೆಯ ಪೆಟ್ಟಿಗೆ, ಕಾಂಚೀವರಂ ರೇಷ್ಮೆ ಬಟ್ಟೆ, ಮಹೇಶ್ವರಿ ರೇಷ್ಮೆ ಸ್ಟೋಲ್ (ಮೇಲುಡುಪು) ಮತ್ತು ತೋಡಾ ಕಸೂತಿ ಶಾಲು ಸೇರಿದಂತೆ ಇತರ ಉಡುಗೊರೆಗಳನ್ನು ನೀಡಿದ್ದಾರೆ.

ಮೋದಿ ಅವರು ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರಿಗೆ 'ಮುರಾದಾಬಾದಿ ಹಿತ್ತಾಳೆ ಆಮೆ'ಯ ಪ್ರತಿಕೃತಿಯನ್ನು ಮತ್ತು ಅವರ ಪತ್ನಿ ವೆರೋನಿಕ್ ಹರ್ಮಿನಿ ಅವರಿಗೆ ಮಾಹೇಶ್ವರಿ ರೇಷ್ಮೆ ಸ್ಟೋಲ್ ಹಾಗೂ ಕರ್ನಾಟಕದ ಬೀದರ್‌ನ ಬಿದರಿಕಲೆಯ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಳ್ಳೈ ಅವರಿಗೆ ಸಿಕ್ಕಿಂನ ಆರ್ಕಿಡ್ ಚಿತ್ರಕಲೆಯನ್ನು ಮತ್ತು ಅವರ ಪತ್ನಿ ಲೀನಾ ಪಿಳ್ಳೈ ಅವರಿಗೆ ಕಾಂಚೀವರಂ ರೇಷ್ಮೆ ಬಟ್ಟೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ, ಸೆಷೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅಝೆರೆಲ್ ಎರ್ನೆಸ್ಟಾ ಅವರಿಗೆ ತಮಿಳುನಾಡಿನ ಟೋಡಾ ಕಸೂತಿ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜೂನ್ 27ರಿಂದ 30ರವರೆಗಿನ ತಮ್ಮ ಮೂರು ದಿನಗಳ ಪ್ರವಾಸದಲ್ಲಿ, ಪ್ರಧಾನಿ ಮೋದಿ ಅವರು ಸೆಷೆಲ್ಸ್‌ನ ಸುವರ್ಣ ಮಹೋತ್ಸವದಲ್ಲಿ ಭಾಗಿಯಾದರು. ಅಲ್ಲದೆ, ಉಭಯ ದೇಶಗಳ ಸ್ನೇಹವನ್ನು ಮತ್ತಷ್ಟು ಗಟ್ಟಿಯಾಗಿಸಲು ಹರ್ಮಿನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani