ಬೀಳಗಿ: ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊರ್ತಿ-ಕೊಲ್ಹಾರ ಸೇತುವೆ ಮೇಲಿಂದ ಬುಧವಾರ ಟಿಪ್ಪರ್ ಸಮೇತ ನದಿಗೆ ಬಿದ್ದಿದ್ದ ಚಾಲಕನ ಶವ ಶುಕ್ರವಾರ ಪತ್ತೆಯಾಗಿದೆ.
ಎರಡು ದಿನಗಳ ಸತತ ಪ್ರಯತ್ನದಿಂದ ಅಗ್ನಿಶಾಮಕ ದಳ ಸಿಬ್ಬಂದಿ, ಶುಕ್ರವಾರ ಟಿಪ್ಪರ್ ಮತ್ತು ಟಿಪ್ಪರ್ ಚಾಲಕ ಸಂತೋಷ ಕೋಟಿ ಅನ್ನು ಕ್ರೇನ್ ಮೂಲಕ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಬೀಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂತೋಷ ಕೋಟಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ, ಅಗ್ನಿ ಶಾಮಕ ದಳದ ಜಿಲ್ಲಾಧಿಕಾರಿ ಪ್ರಕಾಶ ಪವಾರ, ಸಿಪಿಐ ಹನಮಂತ ಸಣಮನಿ, ತಾಲ್ಲೂಕು ಅಗ್ನಿಶಾಮಕ ಅಧಿಕಾರಿ ಆನಂದ ಚಿನಗುಂಡಿ, ಕೊಲಾರ ಪಿಎಸ್‌ಐ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-19-1915494636

