ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ಶಾಂತಿ ಕ್ರಾಂತಿ' ಸಿನಿಮಾವನ್ನು ಮರುಬಿಡುಗಡೆ ಮಾಡಬೇಕೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಶುರುವಾಗಿತ್ತು. ಇದೀಗ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ವಿಡಿಯೊವನ್ನು ನಟ ರಘುರಾಮ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿದ್ದ ಖ್ಯಾತ ನಟಿ ಯಾರು ಗೊತ್ತೇ?'ಬ್ಲೇಝ್: ಮಗನೊಬ್ಬನ ಅಗ್ನಿದಿವ್ಯ' ಪುಸ್ತಕ ಬಿಡುಗಡೆ ಜುಲೈ 11ರಂದುವಿಡಿಯೊದಲ್ಲಿ ಬಾಲಾಜಿ ವೀರ ಸ್ವಾಮಿ ಹೇಳಿದ್ದೇನು?
'ಶಾಂತಿ ಕ್ರಾಂತಿ ಮರುಬಿಡುಗಡೆ ಆಗಬೇಕು ಅಂತ ಟ್ರೆಂಡ್ ಶುರುವಾದ ತಕ್ಷಣವೇ ನಾನು ಮತ್ತು ಅಣ್ಣ ರವಿಚಂದ್ರನ್ ಈ ಬಗ್ಗೆ ಚರ್ಚಿಸಿದ್ದೇವೆ. ಶಾಂತಿ ಕ್ರಾಂತಿಯ ನೆಗೆಟಿವ್ (ರೀಲ್) ನಮ್ಮ ಬಳಿ ಇರುವುದು ಕರಗಿ ಹೋಗಿದೆ. ನೆಗೆಟಿವ್ ಇಲ್ಲದೆ ಸಿನಿಮಾವನ್ನು ಮರುಬಿಡುಗಡೆ ಮಾಡಲು ಸಾಧ್ಯವೇ ಇಲ್ಲ. ಶಾಂತಿ ಕ್ರಾಂತಿಯ ನೆಗೆಟಿವ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಈಗಿನ ತಂತ್ರಜ್ಞಾನಕ್ಕೆ ಅಳವಡಿಸಲು ಅದರ ಮೇಲೆ ಕೆಲಸ ಮಾಡಬೇಕಾಗಿರುವುದರಿಂದ ಒಂದು ವರ್ಷದವರೆಗೆ ಸಮಯಾವಕಾಶ ಬೇಕು' ಎಂದಿದ್ದಾರೆ.
ಸಿನಿಮಾ ಮರುಬಿಡುಗಡೆ ಆಗುತ್ತಿದೆ ಎನ್ನುವುದೆಲ್ಲ ಸುಳ್ಳು...
'ಈ ತಿಂಗಳು ಅಥವಾ ಮುಂದಿನ ತಿಂಗಳು ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಆಗುತ್ತಿದೆ ಎನ್ನುವುದೆಲ್ಲವು ಸುಳ್ಳು. ನಮಗೆ ಸಿನಿಮಾದ ನೆಗೆಟಿವ್ ಸಿಕ್ಕ ತಕ್ಷಣ ನಾವೇ ಖುದ್ದು ಬಿಡುಗಡೆ ಕುರಿತಾದ ಮಾಹತಿ ನೀಡುತ್ತೇವೆ' ಎಂದು ಹೇಳಿದ್ದಾರೆ.

