ನರಸಿಂಹರಾಜಪುರ:ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಸಂಘದ ಕಚೇರಿಯ ಆವರಣದಲ್ಲಿ ಈಚೆಗೆ ನಡೆಯಿತು.
ನೂತನ ಅಧ್ಯಕ್ಷೆ ಸುಮಾ ಶಾಮಯ್ಯ, ಕಾರ್ಯದರ್ಶಿ ರಜನಿ ರಮೇಶ್,ಖಜಾಂಚಿ ಪಲ್ಲವಿ ಲೋಕೇಶ್ ಅಧಿಕಾರ ಸ್ವೀಕಾರ ಮಾಡಿದರು.
ನೂತನ ಅಧ್ಯಕ್ಷೆ ಸುಮ ಶಾಮಯ್ಯ ಮಾತನಾಡಿ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ. ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಮನವಿ ಮಾಡಿದರು. ಸಂಘದ ಸ್ಥಾಪಕ ಅಧ್ಯಕ್ಷೆ ಶ್ಯಾಮಲ ಸತೀಶ್ ಮಾತನಾಡಿದರು.
ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ನೂತನ ಕಾರ್ಯದರ್ಶಿ ರಜನಿ ರಮೇಶ್, ಗೌರವ ಅಧ್ಯಕ್ಷೆ ವನಮಾಲ ಲಕ್ಷ್ಮಣ ಗೌಡ, ಕಟ್ಟಡ ಸಮಿತಿ ಅಧ್ಯಕ್ಷೆ ಲೇಖಾ ವಸಂತ್, ನಿಕಟಪೂರ್ವ ಕಾರ್ಯದರ್ಶಿ ಪೂರ್ಣಿಮ ಮಧು, ನಿಕಟಪೂರ್ವ ಖಜಾಂಚಿ ರೇಖಾ ಮೋಹನ್, ಹಿರಿಯ ಸದಸ್ಯರಾದ ಉಮಾ ದಿವಾಕರ್, ಪುಷ್ಪ ಶಾಂತಕುಮಾರ್, ಶೀಲಾ ಸುಂದರೇಶ್, ಭಾರತಿ ಚಂದ್ರು, ವಿಶಾಲಾಕ್ಷಿ ಜಗದೀಶ್, ಮೀನಾಕ್ಷಿ ಕಾಂತರಾಜ್, ಪೂರ್ಣಿಮ, ಪಲ್ಲವಿ ಲೋಕೇಶ್ ಇದ್ದರು. ಮೊದಲು ನವೀಕರಿಸಿದ ಕಟ್ಟಡ ಪೂಜಾ ಕಾರ್ಯಗಳು ನಡೆಯಿತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-126-555300265

