ಶಿಡ್ಲಘಟ್ಟ: ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣ ಸಮೀಪ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಶೇಷ ತಂಡ ದಿಢೀರ್ ದಾಳಿ ನಡೆಸಿ, 7 ಮಂದಿಯನ್ನು ಬಂಧಿಸಿದೆ.
ಪಣಕ್ಕೆ ಇಟ್ಟಿದ್ದ ₹2,02,800 ನಗದು, 7 ಮೊಬೈಲ್ ಫೋನ್ ಹಾಗೂ 3 ದ್ವಿಚಕ್ರ ವಾಹನ ವಶಪಡಿಸಿಕೊಂಡಿದೆ.
ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಿದ ಮಾಲನ್ನು ಮುಂದಿನ ಕ್ರಮಕ್ಕಾಗಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಬಂಧಿತರನ್ನು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ದೇವರಾಜ್ ಕೆ. (43), ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಗುಟ್ಟಹಳ್ಳಿಯ ಮುನಿಕೃಷ್ಣ ಕೆ.ಎಂ.(53), ಗುಡಿಬಂಡೆ ತಾಲ್ಲೂಕಿನ ದಿನ್ನಹಳ್ಳಿಯ ಶ್ರೀನಿವಾಸ (27), ಚಿಂತಾಮಣಿ ತಾಲ್ಲೂಕಿನ ಕೊನಂಪಲ್ಲಿಯ ಮಂಜುನಾಥರೆಡ್ಡಿ ಕೆ.ಆರ್.(46), ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಮನೋಜ್ (27), ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಗೋವಿಂದಪ್ಪ (65), ಶಿಡ್ಲಘಟ್ಟ ತಾಲ್ಲೂಕಿನ ಬಸವಾಪಟ್ಟಣದ ನಿಖಿಲ್ (31) ಎಂದು ಗುರುತಿಸಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-16-1757936962

