ಮುನಿರಾಬಾದ್: ಸಮೀಪದ ಹೊಸಲಿಂಗಾಪುರ ಗ್ರಾಮದ ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೊಟ್ರಪ್ಪ ಗಡಿಗಿ ಸೇವಾನಿವೃತ್ತಿ ಹಿನ್ನೆಲೆ ಶನಿವಾರ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಶಿಕ್ಷಕ ಮಹೇಶ್ ಸದರಿ ಮಾತನಾಡಿ, 'ಕೊಟ್ರಪ್ಪ ಅವರು ಮುನಿರಾಬಾದ್ ಡೈರಿ ಫಾರಂ ಶಾಲೆಗೆ ನಿವೇಶನ ದೊರಕಿಸಿಕೊಂಡು ಇಲಾಖೆಯಿಂದ ಹೊಸ ಕಟ್ಟಡ ನಿರ್ಮಿಸುವಲ್ಲಿ, ಗಂಗಾವತಿ ತಾಲ್ಲೂಕಿನ ಡಣಕನಕಲ್ ಶಾಲೆಗೆ ಎರಡು ಎಕರೆ ಆಟದ ಮೈದಾನ ದೊರಕಿಸಿ ಕೊಡುವಲ್ಲಿ ಶ್ರಮಿಸಿದ್ದಾರೆ.
ಶಿಕ್ಷಕರ ಸಂಘದ ನಿರ್ದೇಶಕರಾಗಿ, ವಲಯ ಸಂಪನ್ಮೂಲ ವ್ಯಕ್ತಿಗಳಾಗಿ ಅವರ ಸೇವೆ ಅನನ್ಯ' ಎಂದರು.
ಕೊಟ್ರಪ್ಪ ಗಡಿಗಿ-ಜಯಮಾಲಾ ಶಿಕ್ಷಕ ದಂಪತಿಯನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಪರಸಪ್ಪ ಕಂಬಳಿ, ಸುರೇಶ್ ಬೇನಳ್ಳಿ ಇತರರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯಂ, ಮುಖ್ಯಶಿಕ್ಷಕಿ ಎಚ್.ಶಾರದಾ, ಮಂಜುನಾಥ ಕಟ್ಟಿ, ಅಶೋಕ ಗೋನಾಳ, ವಸಂತ ನಾಯಕ, ಜಗದೀಶ್ ಕರ್ಕಿಹಳ್ಳಿ, ಸದ್ದಾಂ ಹುಸೇನ್ ಕಳ್ಳಿಮನಿ, ನಾಗೇಶ, ಅಂಬರೀಶ್ ಇದ್ದರು.
ಅಂದಾನಗೌಡ ನಿರೂಪಿಸಿದರು. ಎಸ್.ಪಿ. ಗೀತಾ ವಂದಿಸಿದರು.
261104-35-1125783194

