ಪ್ರಜಾವಾಣಿ

ಶಿಕ್ಷಣಕ್ಕೆ ಪ್ರತ್ಯೇಕ ಟಿವಿ ಚಾನೆಲ್?

ಶಿಕ್ಷಣಕ್ಕೆ ಪ್ರತ್ಯೇಕ ಟಿವಿ ಚಾನೆಲ್?
  • 932d
  • 47 shares

ಬೆಂಗಳೂರು: 'ಶಿಕ್ಷಣ ಇಲಾಖೆಗೆ ಪ್ರತ್ಯೇಕವಾದ ದೂರದರ್ಶನ ಚಾನೆಲ್‌ ಪ್ರಾರಂಭಿಸುವ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

'ಸದ್ಯ ದೂರದರ್ಶನ ಚಂದನದಲ್ಲಿ ಪ್ರಸಾರವಾಗುತ್ತಿರುವ ಎಸ್ಸೆಸ್ಸೆಲ್ಸಿ ಪುನರ್‌ಮನನ ಕಾರ್ಯಕ್ರಮ ಜನಪ್ರಿಯವಾಗಿದೆ. ಕೊರೊನಾ ನಂತರದ ಸನ್ನಿವೇಶದಲ್ಲಿ ಶಿಕ್ಷಣಕ್ಕೇ ಮೀಸಲಿಟ್ಟ ಪ್ರತ್ಯೇಕ ಟಿವಿ ಚಾನೆಲ್‌ ಆರಂಭಿಸಿದರೆ ಅದರಿಂದ ವಿದ್ಯಾರ್ಥಿ ಸಮುದಾಯಕ್ಕೆ ಬಹಳ ಪ್ರಯೋಜನ ಆಗುವ ನಿರೀಕ್ಷೆ ಇದೆ. ಹೀಗಾಗಿ ಅದಕ್ಕೆ ಬೇಕಾಗುವ ವೆಚ್ಚ ಸಹಿತ ಒಂದು ವಾರದೊಳಗೆ ಸಮಗ್ರ ವರದಿ ಸಿದ್ಧಪಡಿಸಿ ಸಲ್ಲಿಸಬೇಕು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

ಮಾನವ ಸಂಪನ್ಮೂಲ ಇಲಾಖೆಯ ದೈನಂದಿನ ನಿರ್ಣಯಗಳ ಬಗ್ಗೆ ನಿಗಾ ವಹಿಸುವುದಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದ ಒಂದು ಸಮಿತಿಯನ್ನು ರಚಿಸಲು ಸಹ ಅವರು ಸೂಚನೆ ನೀಡಿದ್ದಾರೆ.‌

No Internet connection

Link Copied