Dailyhunt Logo
  • Light mode
    Follow system
    Dark mode
    • Play Story
    • App Story
ಸಿದ್ದ ಉಡುಪು ರಫ್ತು: ಬಾಂಗ್ಲಾದೇಶ, ವಿಯೆಟ್ನಾಗಿಂತ ಭಾರತ ಹಿಂದೆ !

ಸಿದ್ದ ಉಡುಪು ರಫ್ತು: ಬಾಂಗ್ಲಾದೇಶ, ವಿಯೆಟ್ನಾಗಿಂತ ಭಾರತ ಹಿಂದೆ !

ಬೆಂಗಳೂರು: ಸಿದ್ದ ಉಡುಪುಗಳ ರಫ್ತು ವಲಯದಲ್ಲಿ ಭಾರತವೂ ಬಾಂಗ್ಲಾದೇಶ ಹಾಗೂ ವಿಯೆಟ್ನಾಂ ದೇಶಗಳಿಗಿಂತ ಹಿಂದೆ ಇದ್ದು, ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತವು ಮುಂದಿನ ಕೆಲ ವರ್ಷಗಳಲ್ಲಿ ರಫ್ತು ಪ್ರಮಾಣ ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂದು ತಜ್ಞರು ಸಲಹೆ ನೀಡಿದರು.

ಸಿದ್ದ ಉಡುಪು ರಫ್ತು ಉತ್ತೇಜನ ಮಂಡಳಿ(ಎಇಪಿಸಿ) ದೇಶದ ನಾನಾ ಭಾಗದಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸುತ್ತಿರುವ ವಿಚಾರ ಸಂಕಿರಣ ಮಾಲೆಯಡಿ ಬೆಂಗಳೂರಿನಲ್ಲೂ ಉದ್ಯಮಿಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಮಾತ್ರವಲ್ಲದೇ ನಾನಾ ಭಾಗಗಳಿಂದ ಆಗಮಿಸಿದ್ದ ಉದ್ಯಮಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾದರು.

ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ ಬೆಂಗಳೂರು ವಲಯದ ಜಂಟಿ ಮಹಾನಿರ್ದೇಶಕಿ ಡೋನಾ ಘೋಷ್‌ ಮಾತನಾಡಿ, ವಿಶ್ವಾದ್ಯಂತ ಸಿದ್ದ ಉಡುಪುಗಳಿಂದಲೇ 2024ರಲ್ಲಿ 460 ಬಿಲಿಯಲ್‌ ಡಾಲರ್ ವಹಿವಾಟು ನಡೆದಿದೆ. ಭಾರತದ ಪ್ರಮಾಣ 15.7 ಬಿಲಿಯನ್ ಡಾಲರ್. ಬಾಂಗ್ಲಾದೇಶ ಹಾಗೂ ವಿಯೆಟ್ನಾಂ ರಫ್ತು ವಿಚಾರದಲ್ಲಿ ಭಾರತಕ್ಕಿಂತ ಮುಂದೆ ಇವೆ. ಮುಕ್ತ ವ್ಯಾಪಾರ ಒಪ್ಪಂದದ ನೀತಿಗಳಿಗೆ ಅನುಗುಣವಾಗಿ ಗುಣಮಟ್ಟದ ಉತ್ಪಾದನೆ ಮಾಡಿದರೆ 30 ಬಿಲಿಯನ್‌ ಡಾಲರ್‌ವರೆಗೂ ವಿಸ್ತರಣೆ ಮಾಡಬಹುದು. ಉದ್ಯೋಗ ವಲಯವೂ ಇದರಿಂದ ಬಲಗೊಳ್ಳಲಿದೆ ಎಂದು ತಿಳಿಸಿದರು.

ಸಿದ್ದ ಉಡುಪು ರಫ್ತು ಉತ್ತೇಜನ ಮಂಡಳಿ(ಎಇಪಿಸಿ) ಪ್ರಧಾನ ಕಾರ್ಯದರ್ಶಿ ಮಿಥಿಲೇಶ್ವರ ಠಾಕೂರ್ ಮಾತನಾಡಿ, ದೇಶದ ನಾನಾ ಭಾಗಗಳಲ್ಲಿ ಮಂಡಳಿಯು ಚಟುವಟಿಕೆಗಳನ್ನು ರೂಪಿಸಿ ಮುಕ್ತ ವ್ಯಾಪಾರ ಒಪ್ಪಂದಗಳ ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿಕೊಡಲಾಗುತ್ತದೆ. ಭಾರತವು ಗುಣಮಟ್ಟದ ಸಿದ್ದಉಡುಪುಗಳ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ ಎಂದರು.

ಸಿದ್ದ ಉಡುಪು ಉತ್ಪಾದನೆಯಲ್ಲಿ ಭಾರತಕ್ಕೆ ಇರುವ ಅವಕಾಶಗಳು ಹಾಗೂ ಮುಕ್ತ ವ್ಯಾಪಾರ ಒಪ್ಪಂದ ನೀತಿಗಳ ಕುರಿತು ಪುಣೆಯ ಸಿಂಬಾಲಿಸಿಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನ( ಸಿಮ್ಸ್‌) ಆರ್ಥಿಕ, ಅಂತರರಾಷ್ಟ್ರೀಯ ವಹಿವಾಟ ವಿಭಾಗದ ಸಹ ಪ್ರಾಧ್ಯಾಪಕ ಸಂಜಯಕುಮಾರ್ ಮಂಗ್ಲಾ ಅವರು ತಾಂತ್ರಿಕ ಅಂಶಗಳನ್ನಾಧರಿಸಿ ಉಪನ್ಯಾಸ ನೀಡಿದರು.

ಭಾರತವು ಸಿದ್ದ ಉಡುಪುಗಳ ರಫ್ತು ವಲಯದಲ್ಲಿ ಹತ್ತು ವರ್ಷದ ಹಿಂದೆ ಸನ್ನಿವೇಶಕ್ಕೂ ಈಗಿನ ಸ್ಥಿತಿಗೂ ಬದಲಾವಣೆ ಆಗಿದೆ. ಹಿಂದೆಯೆಲ್ಲಾ ಮುಕ್ತ ವ್ಯಾಪಾರ ಒಪ್ಪಂದ ನೀತಿಗಳ ಕಾರಣಕ್ಕೆ ಭಾರತವು ಹಿಂದೆಯೇ ಇತ್ತು. ಬರೀ ಬಳಕೆ ದೇಶವಾಗಿ ಉಳಿದಿಇತ್ತು. ಮೂರ್ನಾಲ್ಕು ವರ್ಷದಲ್ಲಂತೂ ಹಲವು ದೇಶಗಳೊಂದಿಗೆ ಭಾರತ ಸಹಿ ಹಾಕಿದ್ದರಿಂದ ಈಗ ಅವಕಾಶ ತೆರೆದುಕೊಳ್ಳುತ್ತಿವೆ. ರಫ್ತುದಾರ ದೇಶವಾಗಿಯೂ ಗುರುತಿಸಿಕೊಂಡಿದೆ. ಯೂರೋಪ್‌ ದೇಶಗಳೊಂದಿನ ಒಪ್ಪಂದ ಜಾರಿಗೊಳ್ಳುತ್ತಿರುವುದರಿಂದ ಶೇ 8ರಿಂದ ಶೇ 12ರಷ್ಟು ರಫ್ತು ವಿಸ್ತರಣೆಗೆ ಅವಕಾಶವಿದೆ. ಇದಲ್ಲದೇ ಮುಂದಿನ ವರ್ಷದ ಹೊತ್ತಿಗೆ ಇನ್ನೂ ಹಲವು ದೇಶಗಳೊಂದಿಗೆ ರಫ್ತು ಅವಕಾಶ ವಿಸ್ತರಣೆಯಾಗುವುದರಿಂದ ಇನ್ನಷ್ಟು ಸಾಧ್ಯತೆಗಳು ತೆರೆದುಕೊಳ್ಳಲಿವೆ ಎಂದರು.

ಕೆಲವು ನೀತಿಗಳಿಂದ ಸುಂಕ ರಿಯಾಯಿತಿ ಪಡೆಯುತ್ತಿರುವ ಬಾಂಗ್ಲಾದೇಶ, ವಿಯೆಟ್ನಾಂನಂತಹ ದೇಶಗಳು ಈಗ ಹೆಚ್ಚು ರಫ್ತು ಮಾಡುತ್ತಿವೆ. ಭಾರತವೂ ಗುಣಮಟ್ಟದ ಉತ್ಪನ್ನಗಳ ಜೊತೆಗೆ ರಾಸಾಯನಿಕ ಮುಕ್ತ ಸಿದ್ದ ಉಡುಪುಗಳನ್ನು ರಫ್ತು ನೀತಿಯನ್ವಯ ಸರಬರಾಜು ಮಾಡಿದರೆ ವಹಿವಾಟು ವಿಸ್ತರಣೆಗೆ ಅವಕಾಶವಿದೆ. ನೀತಿಗಳು ಹಾಗೂ ಅವುಗಳ ಜಾರಿ ವಿಚಾರದಲ್ಲಿ ಉದ್ದಿಮೆದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮಲ್ಲಿ ಮಾರಾಟವಾಗುವ ಒಂದು ಉಡುಪಿಗೆ ₹ 1 ಸಾವಿರ ಲಭಿಸಿದರೆ, ಯೂರೋಪ್‌ನ ಹಲವು ದೇಶಗಳಲ್ಲಿ ₹8 ಸಾವಿರದಿಂದ ₹9 ಸಾವಿರವರೆಗೂ ಮಾರಾಟವಾಗುತ್ತಿದೆ. ಇದೆಲ್ಲವನ್ನೂ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

.

ಸಂಜಯಕುಮಾರ್ ಮಂಗ್ಲಾ , ಸಹ ಪ್ರಾಧ್ಯಾಪಕ, ಸಿಮ್ಸ್‌ ಪುಣೆಜುಲೈ ತಿಂಗಳಿನಿಂದ ಯೂರೋಪಿನ್‌ 27 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ನೀತಿ ಜಾರಿಗೆ ಬರಲಿದೆ. ಆಗ ರಫ್ತು ಬೇಡಿಕೆ ಹೆಚ್ಚಲಿದ್ದು, ಹತ್ತಿ ಉತ್ಪಾದನೆಯೂ ವಿಸ್ತರಣೆಯಾಗುವ ವಿಶ್ವಾಸವಿದೆ.
Dailyhunt
Disclaimer: This content has not been generated, created or edited by Dailyhunt. Publisher: Prajavani