Dailyhunt Logo
  • Light mode
    Follow system
    Dark mode
    • Play Story
    • App Story
ಸೊಮಾಲಿಯಾ ಕರಾವಳಿ: ಅಪಹರಣಕ್ಕೀಡಾದ ಮೀನುಗಾರಿಕಾ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ

ಸೊಮಾಲಿಯಾ ಕರಾವಳಿ: ಅಪಹರಣಕ್ಕೀಡಾದ ಮೀನುಗಾರಿಕಾ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ

ನವದೆಹಲಿ: ಸೊಮಾಲಿಯಾ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.

ಶಸ್ತ್ರಸಜ್ಜಿತ ಕಡಲ್ಗಳ್ಳರು 'ಅಝಿನಿ' ಹೆಸರಿನ ಹಡಗನ್ನು ಅಪಹರಿಸಿದ್ದರು ಎಂದು ನೌಕಾಪಡೆ ಮಂಗಳವಾರ ತಿಳಿಸಿದೆ. ಸತತ 48 ತಾಸಿನ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಹಡಗಿನಲ್ಲಿದ್ದ ಎಲ್ಲ 20 ಮಂದಿ ಸಿಬ್ಬಂದಿಯನ್ನು ಯಾವುದೇ ಸಾವು-ನೋವುಗಳಿಲ್ಲದೆ ರಕ್ಷಿಸಲಾಗಿದೆ.

ಕಳೆದ ತಿಂಗಳು ಸೊಮಾಲಿಯಾದ ಈಶಾನ್ಯ ಕರಾವಳಿಯಲ್ಲಿ ಶಸ್ತ್ರಸಜ್ಜಿತ ಕಡಲ್ಗಳ್ಳರ ಗುಂಪೊಂದು ಈ ಹಡಗನ್ನು ಅಪಹರಿಸಿತ್ತು. 'ಈ ಅಪಹರಣವು ಕಡಲ ಭದ್ರತೆಗೆ ಬಹುದೊಡ್ಡ ಬೆದರಿಕೆಯಾಗಿತ್ತು. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಮತ್ತಷ್ಟು ದಾಳಿಗಳನ್ನು ನಡೆಸಲು ಈ ಹಡಗನ್ನು 'ಮದರ್ ಶಿಪ್' ಆಗಿ ಬಳಸಿಕೊಳ್ಳುವ ಸಾಧ್ಯತೆಯಿತ್ತು' ಎಂದು ನೌಕಾಪಡೆ ಹೇಳಿದೆ.

ಕಾರ್ಯಾಚರಣೆಗಾಗಿ ತನ್ನ ಯುದ್ಧನೌಕೆಯೊಂದನ್ನು ನೌಕಾಪಡೆ ನಿಯೋಜಿಸಿತು. ಇದಕ್ಕೆ ಕಣ್ಗಾವಲು ವಿಮಾನವೂ ಸಾಥ್ ನೀಡಿತು. ಇವೆರಡೂ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ನಿರಂತರ ಕಣ್ಗಾವಲಿನ ಮೂಲಕ ಹಡಗನ್ನು ಪತ್ತೆಹಚ್ಚಿ, ಅದು ತಪ್ಪಿಸಿಕೊಳ್ಳದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡವು ಎಂದು ಪ್ರಕಟಣೆ ತಿಳಿಸಿದೆ.

ಹಿಂದೂ ಮಹಾಸಾಗರದಲ್ಲಿ ತ್ವರಿತವಾಗಿ ಸ್ಪಂದಿಸುವ ಮತ್ತು ನೆಚ್ಚಿನ ಭದ್ರತಾ ಪಾಲುದಾರ ರಾಷ್ಟ್ರವಾಗಿ ಉಳಿಯುವ ಭಾರತದ ದೃಢ ಬದ್ಧತೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ನೌಕಾಪಡೆ ತಿಳಿಸಿದೆ.

ಸೊಮಾಲಿಯಾ ಕಡಲ್ಗಳ್ಳರು 4 ದಿನಗಳಲ್ಲಿ ಅಪಹರಿಸಿದ 2 ಹಡಗುಗಳಲ್ಲಿದ್ದಾರೆ 6 ಭಾರತೀಯರುಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿದ್ದ 10 ಮಂದಿಯ ಬಿಡುಗಡೆ
Dailyhunt
Disclaimer: This content has not been generated, created or edited by Dailyhunt. Publisher: Prajavani