ದುಬೈ (ಪಿಟಿಐ): ಭದ್ರತಾ ಪರಿಸ್ಥಿತಿಗಳ ಕಾರಣ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ವಿಮಾನ ಸಂಚಾರದಲ್ಲಿನ ವ್ಯತ್ಯಯಗಳು ಮುಂದುವರಿದಿದೆ. ಜೆದ್ದಾಗೆ ವಿಮಾನ ಹಾರಾಟ ನಿಲ್ಲಿಸಿರುವ ತನ್ನ ನಿರ್ಧಾರವನ್ನು ಆಕಾಸ ಏರ್ ಸಂಸ್ಥೆಯು ನವೆಂಬರ್ 18ರವರೆಗೆ ವಿಸ್ತರಿಸಿದೆ.
ಅಲ್ಲದೆ, ರಿಯಾದ್‌ಗೆ ಸಂಚರಿಸುವ ವಿಮಾನ ಸೇವೆಯನ್ನು ನವೆಂಬರ್ 30ರವರೆಗೆ ಸ್ಥಗಿತಗೊಳಿಸಿರುವುದಾಗಿ ಅದು ಭಾನುವಾರ ತಿಳಿಸಿದೆ.
ಜೆದ್ದಾ, ರಿಯಾದ್ ಮತ್ತು ದಮ್ಮಾಮ್‌ನ ಸೇವೆಯನ್ನು ನವೆಂಬರ್ 14ರವರೆಗೆ ಸ್ಥಗಿತಗೊಳಿಸಿರುವುದಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡು ದಿನಗಳ ಹಿಂದೆ ಘೋಷಿಸಿದ್ದವು.
ಸೌದಿಯಲ್ಲಿ ವಿಮಾನ ನಿಲ್ದಾಣಗಳು ಸೇರಿದಂತೆ ನಾಗರಿಕರು ಮತ್ತು ಮೂಲಸೌಕರ್ಯಗಳ ಮೇಲೆ ದಾಳಿಗಳು ನಡೆದ ಕಾರಣ ವಿಮಾನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಅಕ್ಟೋಬರ್ 21ರಂದು ದಮ್ಮಾಮ್‌ನ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಭಾರತೀಯ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದರು. ದೇಶದ ಅರಮ್‌ಕೊ ತೈಲ ಶುದ್ದೀಕರಣ ಘಟಕದ ಮೇಲೆ ನಡೆದ ದಾಳಿಯಲ್ಲಿ ಮತ್ತೊಬ್ಬ ಭಾರತೀಯ ಗಾಯಗೊಂಡಿದ್ದಾರೆ ಎಂದು ರಿಯಾದ್‌ನ ಭಾರತೀಯ ರಾಯಭಾರಿ ಕಚೇರಿ ತಿಳಿಸಿತ್ತು.
261102-51-824412696

