Dailyhunt Logo
  • Light mode
    Follow system
    Dark mode
    • Play Story
    • App Story
ಸ್ಟಿಂಗ್ ಮಾಡಲು ಬಂದವರನ್ನು ಲಘುವಾಗಿ ಬಿಟ್ಟಿದ್ದೇಕೆ: ನಾರಾಯಣಸ್ವಾಮಿ ಪ್ರಶ್ನೆ

ಸ್ಟಿಂಗ್ ಮಾಡಲು ಬಂದವರನ್ನು ಲಘುವಾಗಿ ಬಿಟ್ಟಿದ್ದೇಕೆ: ನಾರಾಯಣಸ್ವಾಮಿ ಪ್ರಶ್ನೆ

ಕಲಬುರಗಿ: 'ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಸದ್ದು ಮಾಡುತ್ತಿದೆ. ನನ್ನನ್ನೂ ಸ್ಟಿಂಗ್ ಆಪರೇಷನ್‌ ಮಾಡಲು ಬಂದಿದ್ದರು ಎಂದು ಮುಖ್ಯಮಂತ್ರಿ ‌ಹೇಳಿದ್ದಾರೆ. ಅಂಥವರನ್ನು ಸಿಎಂ ಹೋಗಲು ಬಿಟ್ಟಿದ್ದೇಕೆ? ಯಾವ ಉಸಾಬರಿಯೂ ಬೇಡ ಎಂದು ಬಿಟ್ಟಿದ್ದಿರೋ ಇಲ್ಲವೇ ಸಚಿವರು, ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಲು ಈ ಸ್ಟಿಂಗ್ ಆಪರೇಷನ್‌ ತಂತ್ರ ಮುನ್ನೆಲೆಗೆ ತಂದಿದ್ದೀರೋ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷವೇ ಸ್ಟಿಂಗ್ ಆಪರೇಷನ್‌ಗಳ ‌ಕಾರ್ಖಾನೆ ಎಂದು ಜನ ಆಡಿಕೊಳ್ಳುತ್ತಾರೆ' ಎಂದು ಕುಟುಕಿದರು.

'ಸಿದ್ದರಾಮಯ್ಯ ಇದೀಗ ‌ಅಧಿಕಾರ ತ್ಯಾಗ ಮಾಡಿ ಮನೆಯಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ‌ ಇದ್ದಾಗ ನಡೆಯದ ಸ್ಟಿಂಗ್ ಆಪರೇಷನ್‌, ಇದೀಗ ಹೇಗೆ ನಡೆಯಿತೇ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ ನೋಡಿ ಮುಖ್ಯಮಂತ್ರಿ ಸುಮ್ಮನೇ ಕುಳಿತಿದ್ದೇಕೆ? ತನಿಖೆ ನಡೆಸಲು ಇರುವ ತೊಂದರೆ ಏನು? ನೀವೇ ಮುಖ್ಯಮಂತ್ರಿಯಾಗಿ ಅಸಹಾಯಕತೆ ತೋರಿದ್ದೇಕೆ? ಬೇರೆಯವರಿಗೆ ಎಚ್ಚರಿಕೆ ಕೊಡುವ ನೀವು, ನಿಮ್ಮ ಬಳಿ ಬಂದಿದ್ದಾಗ ಅವರನ್ನು ಹಿಡಿದು ಕಾನೂನು ಕ್ರಮ ಏಕೆ ಜರುಗಿಸಲಿಲ್ಲ' ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani