Dailyhunt Logo
  • Light mode
    Follow system
    Dark mode
    • Play Story
    • App Story
ತೈಲ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಗಲ್ಫ್ ಮೇಲೆ ಇರಾನ್ ದಾಳಿ

ತೈಲ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಗಲ್ಫ್ ಮೇಲೆ ಇರಾನ್ ದಾಳಿ

ದುಬೈ: ಗಲ್ಫ್‌ ರಾಷ್ಟ್ರಗಳಲ್ಲಿನ ತೈಲ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್‌ ಸೇನೆ ಶುಕ್ರವಾರ ತೀವ್ರ ದಾಳಿ ನಡೆಸಿದೆ.

ಅಮೆರಿಕದ ಸೇನಾ ನೆಲೆಗಳು ಇರುವ ದೇಶಗಳ ಮೇಲೆ ದಾಳಿ ಮುಂದುವರಿಸುವಂತೆ ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಗುರುವಾರ ಹೇಳಿದ್ದರು.

ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ. ಮತ್ತೊಂದೆಡೆ, ಇರಾನ್‌ಗೆ ಭಾರಿ ಪ್ರಹಾರ ನೀಡಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ.

'ಹೊರ್ಮುಜ್‌ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ಅಗತ್ಯವಿದ್ದರೆ ಅಮೆರಿಕ ನೌಕಾಪಡೆಯು ಬೆಂಗಾವಲು ಒದಗಿಸಲಿದೆ' ಎಂದು ಟ್ರಂಪ್‌ ಅವರು 'ಫಾಕ್ಸ್‌ ನ್ಯೂಸ್‌'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 'ಮುಂದಿನ ವಾರ ಇರಾನ್‌ ಮೇಲೆ ಇನ್ನಷ್ಟು ದಾಳಿ ನಡೆಯಲಿದೆ' ಎಂದೂ ಗುಡುಗಿದ್ದಾರೆ.

'ಇರಾನ್‌ ಬಳಿ ಇದೀಗ ನೌಕಾಪಡೆ ಮತ್ತು ವಾಯುಪಡೆ ಇಲ್ಲ. ಅವರಲ್ಲಿದ್ದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಾಶಪಡಿಸಲಾಗಿದೆ. ಅವರ ನಾಯಕರನ್ನೂ ಹತ್ಯೆ ಮಾಡಲಾಗಿದೆ' ಎಂದು ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಶುಕ್ರವಾರ ಮುಂಜಾನೆ ಇರಾನ್‌ ಹಾರಿಸಿದ ಸುಮಾರು 50 ಡ್ರೋನ್‌ಗಳನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆ ನಾಶಪಡಿಸಿದೆ. ಒಮಾನ್‌ನ ಸೊಹಾರ್‌ನಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಎರಡು ಡ್ರೋನ್‌ಗಳು ಅಪ್ಪಳಿಸಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಹರೇನ್‌ನಲ್ಲಿ ದಾಳಿಯ ಬಗ್ಗೆ ಎಚ್ಚರಿಕೆ ನೀಡುವ ಸೈರನ್‌ಗಳು ಮೊಳಗಿದವು. ದುಬೈನಲ್ಲಿ ಕೈಗಾರಿಕಾ ಪ್ರದೇಶದಿಂದ ದಟ್ಟ ಹೊಗೆ ಎದ್ದಿದ್ದು, ಕ್ಷಿಪಣಿಯ ಅವಶೇಷ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈ ಇಂಟರ್‌ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್‌ನಲ್ಲಿರುವ ಕಟ್ಟಡದ ಮೇಲೆ ಕ್ಷಿಪಣಿಯ ಅವಶೇಷ ಬಿದ್ದು ಹಾನಿ ಉಂಟಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani