ಮೂಡಿಗೆರೆ: ತಾಲ್ಲೂಕಿನ ತರುವೆ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಬಾಹ್ಯಕಾಶ ಪ್ರಯೋಗಾಲಯವನ್ನು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಾಲೆಯ ಪ್ರಯೋಗಾಲಯವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ರಾಜ್ಯದಲ್ಲಿ 12 ಏಕಲವ್ಯ ಮಾದರಿ ವಸತಿ ಶಾಲೆಗಳಿದ್ದು, ಬಾಹ್ಯಕಾಶ ಪ್ರಯೋಗಾಲಯದ ಪ್ರಯೋಜನವನ್ನು ಪಡೆದ ರಾಜ್ಯದ 4 ಶಾಲೆಗಳಲ್ಲಿ ಮೂಡಿಗೆರೆ ತಾಲ್ಲೂಕಿನ ತರುವೆ ಏಕಲವ್ಯ ವಸತಿ ಶಾಲೆಯೂ ಒಂದಾಗಿದೆ.
ಭೌತವಿಜ್ಞಾನ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಯೋಗ ಸಾಧನಗಳು, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗ್ರಹ, ನಕ್ಷತ್ರ, ಸೌರವ್ಯೂಹದ ಮಾದರಿಯನ್ನು ತಿಳಿಯಲು ದೂರದರ್ಶಕವನ್ನು ಇರಿಸಲಾಗಿದೆ. ಜೊತೆಗೆ ರಾಕೆಟ್‌ಗಳ ಮಾದರಿ ಬಾಹ್ಯಕಾಶ ನೌಕೆಗಳ ಮಾದರಿಯನ್ನಿಡಲಾಗಿದೆ.
ಪ್ರಯೋಗಾಲಯದಲ್ಲಿ ವಿಜ್ಞಾನ, ತಂತ್ರಜ್ಞಾನದ ಬೋಧನೆಗೆ ಶಿಕ್ಷಕರಾದ ಅಮಿತ್ ಕುಮಾರ್, ಎಸ್.ಡಿ. ಐಶ್ವರ್ಯ ಅವರನ್ನು ನಿಯೋಜಿಸಲಾಗಿದೆ. ತರುವೆ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಬಾಹ್ಯಾಕಾಶ ಪ್ರಯೋಗಾಲಯ ಸೀಮಿತವಾಗಿದ್ದರೂ ಬೇರೆ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ತರಬೇತಿ ಪಡೆದು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಶಾಲೆಯ ಪ್ರಾಚಾರ್ಯ ಸತೀಶ್ ಪ್ರಸಾದ್ ಜೈಸ್ವಾಲ್ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-126-1554711437

