Dailyhunt Logo
  • Light mode
    Follow system
    Dark mode
    • Play Story
    • App Story
ತಿಂಗಳ ಬೆಳಕು ಕಾರ್ಯಕ್ರಮ ನಾಳೆ ಹುನಗುಂದದಲ್ಲಿ ನಡೆಯಲಿದೆ

ತಿಂಗಳ ಬೆಳಕು ಕಾರ್ಯಕ್ರಮ ನಾಳೆ ಹುನಗುಂದದಲ್ಲಿ ನಡೆಯಲಿದೆ

ಹುನಗುಂದ: ನಗರದ ಹೊನ್ನಕುಸುಮ ಸಾಹಿತ್ಯ ವೇದಿಕೆಯ ಅಡಿಯಲ್ಲಿ ಪ್ರತಿ ತಿಂಗಳು ನಡೆಯುವ ತಿಂಗಳ ಬೆಳಕು ಮಾಲಿಕೆಯ 33ನೇ ಕಾರ್ಯಕ್ರಮವು ಇಲ್ಲಿನ ವಿ.ಎಂ.ಎಸ್.ಆರ್.ವಿ. (ವಸ್ತ್ರದ್) ಪದವಿ ಮಹಾವಿದ್ಯಾಲಯದಲ್ಲಿ ಜುಲೈ 5 ರಂದು ಬೆಳಿಗ್ಗೆ 10:30 ಗಂಟೆಗೆ ನಡೆಯಲಿದೆ.

ಸಾಹಿತ್ಯದ ಕೃತಿಯೊಂದನ್ನು ಆಯ್ಕೆ ಮಾಡಿಕೊಂಡು ಲೇಖಕರ ಸಮ್ಮುಖದಲ್ಲಿ ಚರ್ಚೆ, ವಿಶ್ಲೇಷಣೆ, ವಿಮರ್ಶೆ ಹಾಗೂ ಓದುಗರೊಂದಿಗೆ ಸಂವಾದ ನಡೆಯಲಿದೆ.

ಈ ಬಾರಿ ಸಾಹಿತಿ ಮಲ್ಲಿಕಾರ್ಜುನ ಅಂಗಡಿ ಅವರ 'ಇಳಕಲ್ ಕೋಟೆಗಳು ಮತ್ತು ಇತರ ಲೇಖನಗಳು' ಎನ್ನುವ ಕೃತಿ ಚರ್ಚೆಗೆ ಬರಲಿದ್ದು, ಕೃತಿಯ ಕುರಿತು ಪದವಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಎಸ್.ಆರ್. ನಾಗಣ್ಣವರ ಮಾತನಾಡಲಿದ್ದಾರೆ ಎಂದು ಹೊನ್ನಕುಸುಮ ಸಾಹಿತ್ಯ ವೇದಿಕೆ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-19-212189746

Dailyhunt
Disclaimer: This content has not been generated, created or edited by Dailyhunt. Publisher: Prajavani