Dailyhunt Logo
  • Light mode
    Follow system
    Dark mode
    • Play Story
    • App Story
ಟಿಟಿ: ಕೃಷ್ಣ, ಇಳಾಗೆ ಪ್ರಶಸ್ತಿ

ಟಿಟಿ: ಕೃಷ್ಣ, ಇಳಾಗೆ ಪ್ರಶಸ್ತಿ

ಬೆಂಗಳೂರು: ಕೃಷ್ಣ ಮೌದ್ಗಲ್ಯ ಮತ್ತು ಇಳಾ ಹೆಗ್ಡೆ ಅವರು ಕಬ್ಬನ್‌ ಪಾರ್ಕ್‌ನ ಕೆಜಿಎಸ್‌ ಕ್ಲಬ್‌ನಲ್ಲಿ ನಡೆಯುತ್ತಿರುವ ಏಳನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 11 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದರು.

ಬೆಂಗಳೂರು ನಗರ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಕೃಷ್ಣ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 14-12, 5-11, 14-12, 11-9ರಿಂದ ಚಿರಾಯು ಬಿ.ಎನ್‌. ವಿರುದ್ಧ ಗೆಲುವು ಸಾಧಿಸಿದ. ಇಳಾ ಫೈನಲ್‌ನಲ್ಲಿ 11-5, 10-12, 11-7, 11-13, 11-2ರಿಂದ ನಿಥಿಲಾ ರಕ್ಷಿತಾ ಬಿ. ವಿರುದ್ಧ ಜಯ ಗಳಿಸಿದಳು.

261104-4-1949242567

Dailyhunt
Disclaimer: This content has not been generated, created or edited by Dailyhunt. Publisher: Prajavani