ತುಮರಿ (ಶಿವಮೊಗ್ಗ ಜಿಲ್ಲೆ): ಶಾಲೆಗೆ ಕಾಯಂ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ಸಾಗರ ತಾಲ್ಲೂಕಿನ ತುಮರಿ ಸಮೀಪದ ಕಳೂರು ಹಿರಿಯ ಪ್ರಾಥಮಿಕ ಶಾಲೆ ಎದುರು ಪೋಷಕರು ಸೋಮವಾರ ಪ್ರತಿಭಟನೆ ನಡೆಸಿದರು.
ಶಾಲೆಗೆ ಬೀಗ ಹಾಕಿ ಬಂದ್ ಮಾಡಿ ಶಾಲೆ ಎದುರು ಮಕ್ಕಳ ಜೊತೆ ಕುಳಿತು ಪೋಷಕರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಸಹ ಕಾಯಂ ಶಿಕ್ಷಕರು ಇಲ್ಲ ಎಂದು ಪೋಷಕರ ದೂರಿದರು.
ನಮಗೆ ಸರಿಯಾಗಿ ಪಾಠ ಮಾಡಲೂ ಶಿಕ್ಷಕರಿಲ್ಲ ಎಂದು ವಿದ್ಯಾರ್ಥಿಗಳ ಅಳಲು ತೋಡಿಕೊಂಡರು. ಕೆಲ ಕಾಲ ಶಿಕ್ಷಣಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ.
ಪ್ರತಿಭಟನೆ ವೇಳೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ. ಓಂಕಾರ ಜೈನ್, ಡಾಕಪ್ಪ, ನಾಗರಾಜ್, ಲೋಕಪಾಲ್ ಜೈನ್ ಇದ್ದರು. ಶಿಕ್ಷಣಾಧಿಕಾರಿ ದಿನೇಶ ಪೋಷಕರ ಮನವಿ ಸ್ವೀಕರಿಸಿದರು.

