Dailyhunt Logo
  • Light mode
    Follow system
    Dark mode
    • Play Story
    • App Story
ತ್ಯಾವರೆಕೊಪ್ಪ: ಅಮ್ಮನ ಆರೈಕೆ ಸಿಗದೇ ನಾಲ್ಕು ಸಿಂಹದ ಮರಿಗಳ ಸಾವು

ತ್ಯಾವರೆಕೊಪ್ಪ: ಅಮ್ಮನ ಆರೈಕೆ ಸಿಗದೇ ನಾಲ್ಕು ಸಿಂಹದ ಮರಿಗಳ ಸಾವು

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿನ ಸಿಂಹಿಣಿ 'ಸಾರಾ' ಈಚೆಗೆ ಜನ್ಮ ನೀಡಿದ್ದ ನಾಲ್ಕು ಮರಿಗಳು ತಾಯಿಯ ಪೋಷಣೆ ದೊರೆಯದೆ ನಿತ್ರಾಣಗೊಂಡು ಕೆಲವೇ ದಿನಗಳಲ್ಲಿ ಮೃತಪಟ್ಟಿವೆ.

ಗುಜರಾತ್‌ನಿಂದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ತರಲಾಗಿದ್ದ 'ಸಾರಾ' ಈ ತಿಂಗಳ ಮೊದಲ ವಾರದಲ್ಲಿ ಮರಿಗಳಿಗೆ ಜನ್ಮ ನೀಡಿತ್ತು.

ಮರಿಗಳಿಗೆ ತಾಯಿ ಸಮರ್ಪಕವಾಗಿ ಹಾಲು ಕುಡಿಸದ ಕಾರಣ ಕ್ರಮೇಣ ನಿತ್ರಾಣಗೊಂಡಿದ್ದವು. ಅವುಗಳನ್ನು ಉಳಿಸಿಕೊಳ್ಳಲು ಪೂರಕ ಆಹಾರ ಕೊಡುವುದು ಹಾಗೂ ಪೋಷಣೆಯಂತಹ ಕ್ರಮಕ್ಕೆ ಮೃಗಾಲಯದ ಆಡಳಿತ ಮುಂದಾಗಿತ್ತು. ಹೀಗಿದ್ದರೂ ಆರೋಗ್ಯ ಕ್ಷೀಣಿಸಿ ಅವು ಸಾವಿಗೀಡಾಗಿವೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಅವರಿಗೆ ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Prajavani