Dailyhunt
ತ್ಯಾವರೆಕೊಪ್ಪಕ್ಕೆ ಮತ್ತೆರಡು ಸಿಂಹಗಳ ಸೇರ್ಪಡೆ

ತ್ಯಾವರೆಕೊಪ್ಪಕ್ಕೆ ಮತ್ತೆರಡು ಸಿಂಹಗಳ ಸೇರ್ಪಡೆ

ಶಿವಮೊಗ್ಗ: ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಸಿಂಹಗಳ ಆಗಮನವಾಗಿದೆ. ಪ್ರಸ್ತುತ ನಾಲ್ಕು ಸಿಂಹಗಳಿದ್ದವು. ಹೊಸ ಸಿಂಹಗಳ ಸೇರ್ಪಡೆಯಿಂದ ಧಾಮದ ಸಿಂಹಗಳ ಸಂಖ್ಯೆ 6ಕ್ಕೇರಿದೆ.

ಏಳು ವರ್ಷಗಳ ಸುಚಿತ್ರಾ, ಯಶವಂತ ಜೋಡಿ ಆಗಮನದಿಂದ ಸಂತಾನಾಭಿವೃದ್ಧಿಯ ನಿರೀಕ್ಷೆ ಮೂಡಿದೆ. 13 ವರ್ಷಗಳಿಂದ ಧಾಮದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆದಿಲ್ಲ. ಚಾಮುಂಡಿ ಹುಲಿಗೆ ಜನಿಸಿದ್ದ ವಿಜಯದಶಮಿ ಹುಲಿಯೇ ಕೊನೆಯ ಮರಿ.

'ಬನ್ನೇರುಘಟ್ಟದಿಂದ ಎರಡು ಸಿಂಹಗಳನ್ನು ತರಲಾಗಿದೆ. ಅವುಗಳ ಹೊಂದಾಣಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು' ಎಂದು ಧಾಮದ ಡಿಸಿಎಫ್‌ ಮುಕುಂದ್ ಚಂದ್' ಮಾಹಿತಿ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani