Wednesday, 21 Oct, 4.26 pm ಪ್ರಜಾವಾಣಿ

ಜಿಲ್ಲೆ
ಉಡುಪಿ: ಬಲೆಗೆ ಬಿದ್ದ ದೈತ್ಯಾಕಾರದ ತೊರಕೆ ಮೀನು

ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುಭಾಶ್ ಸಾಲಿಯಾನ್ ಅವರ ಬಲೆಗೆ ದೈತ್ಯಾಕಾರದ ತೊರಕೆ ಮೀನುಗಳು ಸಿಕ್ಕಿಬಿದ್ದಿವೆ. ಒಂದು ಮೀನು 750 ಕೆ.ಜಿ ತೂಗಿದರೆ ಮತ್ತೊಂದು 250 ಕೆ.ಜಿ ಇದೆ.

ಬೋಟ್‌ನಿಂದ ಮೀನುಗಳನ್ನು ಕ್ರೇನ್ ಸಹಾಯದಿಂದ ಬಂದರಿಗೆ ಇಳಿಸಲಾಯಿತು. ಈ ಮೀನಿಗೆ ಸ್ಥಳೀಯವಾಗಿ ಎರಡು ಕೊಂಬು ತೊರಕೆ ಎಂದು ಕರೆಯುತ್ತಾರೆ. ಈ ವರ್ಷ ಸಿಕ್ಕ ದೊಡ್ಡಗಾತ್ರದ ಮೀನುಗಳನ್ನು ನೋಡಲು ಬಂದರಿಗೆ ನೂರಾರು ಮಂದಿ ಬಂದಿದ್ದರು. ಹಲವರು ಫೋಟೊ ಕ್ಲಿಕ್ಕಿಸಿಕೊಂಡು, ವಿಡಿಯೊ ಮಾಡಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top