Dailyhunt Logo
  • Light mode
    Follow system
    Dark mode
    • Play Story
    • App Story
ಉಡುಪಿ ಇಪಿಎಫ್‌ಒ ಕಚೇರಿಗೆ ಭವಿಷ್ಯ ನಿಧಿ-2026 ಪ್ರಶಸ್ತಿ

ಉಡುಪಿ ಇಪಿಎಫ್‌ಒ ಕಚೇರಿಗೆ ಭವಿಷ್ಯ ನಿಧಿ-2026 ಪ್ರಶಸ್ತಿ

ಉಡುಪಿ: ಪಿಂಚಣಿ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಉಡುಪಿಯ ಇಪಿಎಫ್‌ಒ ಪ್ರಾದೇಶಿಕ ಕಚೇರಿಯು ಅತ್ಯುತ್ತಮ ಕಚೇರಿಯಾಗಿ ಹೊರಹೊಮ್ಮಿದ್ದು ಭವಿಷ್ಯ ನಿಧಿ-2026 ಪ್ರಶಸ್ತಿಗೆ ಭಾಜನವಾಗಿದೆ.

ಈಚೆಗೆ ನವದೆಹಲಿಯ ಚಾಣಕ್ಯಪುರಿಯ ಡಾ.ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಇಪಿಎಫ್‌ಒನ 74ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಡುಪಿ ಇಪಿಎಫ್‌ಒ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ- II ಶಶಿಕಾಂತ್ ದಹಿಯಾ ಕಚೇರಿಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಪ್ರಕಟಣೆ ತಿಳಿಸಿದೆ.

261104-28-417089460

Dailyhunt
Disclaimer: This content has not been generated, created or edited by Dailyhunt. Publisher: Prajavani