ನವದೆಹಲಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದಾರೆ.
ಬಜೆಟ್ ಮುಖ್ಯಾಂಶಗಳು
* ಶೇ 4.3 ರಷ್ಟು ವಿತ್ತೀಯ ಕೊರತೆ
* ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿ
* ಆದಾಯ ತೆರಿಗೆ ಸಲ್ಲಿಕೆ ವಿಳಂಬಕ್ಕೆ ಶೇ 10ರಷ್ಟು ದಂಡ, ಶಿಕ್ಷೆ ಇಲ್ಲ.
* ವಿದೇಶ ಯಾತ್ರೆ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ ಟಿಡಿಎಸ್ ಮೊತ್ತ ಶೇ 2ಕ್ಕೆ ಇಳಿಕೆ. ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಕಡಿತ
* ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ. ಮಾ.31ರ ತನಕ ಪರಿಷ್ಕೃತ ತೆರಿಗೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ
* ಮೋಟಾರು ಅಪಘಾತ ಕ್ಲೇಮುಗಳಿಗೆ ತೆರಿಗೆ ವಿನಾಯಿತಿ
* ಬಂಡವಾಳ ವೆಚ್ಚ 12.2 ಲಕ್ಷ ಕೋಟಿ
* ಬೆಂಗಳೂರು ಸೇರಿದಂತೆ ಏಳು ಹೈ ಸ್ಪೀಡ್ ರೈಲು ಯೋಜನೆ ಘೋಷಣೆ
* 2ನೇ ಮತ್ತು 3ನೇ ಹಂತದ ನಗರಗಳಿಗಳಿಗಾಗಿ ಎಂಎಸ್‌ಎಂಇಗಳಿಗಾಗಿ ಕಾರ್ಪೊರೇಟ್ ಮಿತ್ರ ಯೋಜನೆ ಘೋಷಣೆ
* ಕ್ಯಾನ್ಸರ್ ಸಂಬಂಧಿತ 17 ಔಷಧಿಗಳು, 7 ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 7 ಔಷಧಿಗಳ ಮೇಲೆ ತೆರಿಗೆ ವಿನಾಯಿತಿ.
* ತಮಿಳುನಾಡು, ಕೇರಳ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಅಪೂರ್ವ ಖನಿಜಗಳ ಕಾರಿಡಾರ್ ಘೋಷಣೆ
* ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ಖಾದಿ ಕೈಮಗ್ಗಗಳಿಗೆ ಉತ್ತೇಜನ.
* ರಿಫಾರ್ಮ್ ಎಕ್ಸ್‌ಪ್ರೆಸ್ ಘೋಷಣೆ: ಉದ್ಯೋಗ ಸೃಷ್ಟಿ, ಉತ್ಪಾದನೆಗೆ ಉತ್ತೇಜನ, ಬೆಳವಣೊಗೆಗ ಉತ್ತೇಜನ
* ಮೀಸಲು ವ್ಯಾಪಾರ ಕಾರಿಡಾರ್ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲಾಗುವುದು. ಹಡಗು ದುರಸ್ತಿ ಕೇಂದ್ರಗಳನ್ನು ವಾರಣಾಸಿ ಮತ್ತು ಪಟ್ನಾದಲ್ಲಿ ಸ್ಥಾಪಿಸುವ ಉದ್ದೇಶ. ಜತೆಗೆ ಕರಾವಳಿ ಕಾರ್ಗೊ ಉತ್ತೇಜನ ಯೋಜನೆಯನ್ನು ಒಳನಾಡು ಜಲಮಾರ್ಗ ಮತ್ತು ಕರಾವಳಿಯಲ್ಲೂ ಜಾರಿಗೆ ತರಲಾಗುವುದು.
* ಸೆಮಿ ಕಂಡಕ್ಟರ್ ವಲಯ ಉತ್ತೇಜನಕ್ಕಾಗಿ ₹40,000 ಕೋಟಿ ಮೀಸಲು
* ಸೇವಾ ವಲಯದಲ್ಲಿ ಎಐ ಪರಿಣಾಮ ಅಧ್ಯಯನಕ್ಕೆ ಉನ್ನತ ಮಟ್ಟದ ಸ್ಥಾಯಿ ಸಮಿತಿ ಘೋಷಣೆ: ಶೈಕ್ಷಣಿಕ, ಔದ್ಯೋಗಿಕ ಮತ್ತು ಉದ್ಯಮದಲ್ಲಿ ಪರಿಣಾಮ ಕುರಿತ ಅಧ್ಯಯನ, ಈ ವಲಯಗಳು ಜಾಗತಿಕವಾಗಿ ಶೇ 10ರಷ್ಟು ಷೇರಿನೊಂದಿಗೆ ಜಾಗತಿಕವಾಗಿ ನಾಯಕತ್ವ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.
* ಅನಿವಾಸಿ ಭಾರತೀಯರು ಪೋರ್ಟ್ ಪೋಲಿಯೊ ಹೂಡಿಕೆ ಯೋಜನೆಯಡಿ ಭಾರತದ ಷೇರುಗಳಲ್ಲಿ ಹೂಡಿಕೆಗೆ ಅವಕಾಶ
* ಕರ್ನಾಟಕ ಮತ್ತು ಕೇರಳವನ್ನು ಒಳಗೊಂಡು ಕರಾವಳಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ತೆಂಗು, ಗಂಧ, ಗೇರು ಬೆಳೆಗೆ ಉತ್ತೇಜನ
ಅಗ್ಗವಾಗಲಿರುವ ವಸ್ತುಗಳು
* ಚರ್ಮ ಅಥವಾ ಸಿಂಥೆಟಿಕ್ ಪಾದರಕ್ಷೆಗಳು
* ಸ್ಮಾರ್ಟ್‌ಫೋನ್‌ಗಳು
* ಇವಿ ಬ್ಯಾಟರಿಗಳು
* ಮೈಕ್ರೊವೇವ್ ಅವನ್
* ಸೋಲಾರ್ ಪ್ಯಾನಲ್‌ಗಳು
* ಲೀಥಿಯಂ ಬ್ಯಾಟರಿ ಬಿಡಿಭಾಗಗಳು
* ನಾಗರಿಕ ತರಬೇತಿ ವಿಮಾನಗಳ ಬಿಡಿಭಾಗಗಳು
* ಚರ್ಮೋತ್ಪನ್ನಗಳು
* ವೈಯಕ್ತಿಕ ಬಳಕೆಗೆ ಬಳಸುವ ತೆರಿಗೆ ವಿಧಿಸಬಹುದಾದ ಔಷಧಿ ಉತ್ಪನ್ನಗಳು
ತುಟ್ಟಿ ಯಾವುದೆಲ್ಲ?
* ಆಮದಾಗುವ ಛತ್ರಿಗಳು ಮತ್ತು ಅದರ ಬಿಡಿಭಾಗಗಳಿಗೆ ನಿರ್ದಿಷ್ಟ ಕನಿಷ್ಟ ಸುಂಕ ವಿಧಿಸಲಾಗುತ್ತಿದ್ದು, ಅವು ದುಬಾರಿಯಗಲಿವೆ.
* ಸಿಗರೇಟ್, ಪಾನ್ ಮಸಾಲ ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಕಸ್ಟಮ್ ಸುಂಕ ಮತ್ತು ಆರೋಗ್ಯ ಸೆಸ್ ವಿಧಿಸಲಾಗುತ್ತಿದೆ.
* ಷೇರುಪೇಟೆಗೆ ಸಂಬಂಧಿಸಿದಂತೆ ಫ್ಯೂಚರ್ ಮತ್ತು ಆಪ್ಷನ್ ಟ್ರೇಡಿಂಗ್ ಸಹ ದುಬಾರಿಯಾಗಲಿದೆ.
*

