Dailyhunt
ಉತ್ತರಾಖಂಡ: ಹಿಮಪಾತದಿಂದ 8 ಜನರ ಸಾವು

ಉತ್ತರಾಖಂಡ: ಹಿಮಪಾತದಿಂದ 8 ಜನರ ಸಾವು

ಗೋಪೇಶ್ವರ, ಉತ್ತರಾಖಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಚೀನಾ ಗಡಿ ಸಮೀಪ ಸಂಭವಿಸಿದ ಹಿಮಪಾತದಲ್ಲಿ ಬಾರ್ಡರ್‌ ರೋಡ್‌ ಆರ್ಗನೈಜೇಶನ್‌ಗೆ (ಬಿಆರ್‌ಒ) ಸೇರಿದ 8 ಜನ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ನೀತಿ ಕಣಿವೆಯ ಸುಮ್ನಾ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಇಬ್ಬರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಶನಿವಾರ ಆರು ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸ್ವಾತಿ ಭದೌರಿಯಾ ಹೇಳಿದರು.

ಜೋಶಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌, 'ಘಟನಾ ಸ್ಥಳದಿಂದ ನಾಲ್ವರು ಗಾಯಗೊಂಡವರನ್ನು ರಕ್ಷಿಸಲಾಗಿದೆ' ಎಂದು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani