ಬಸವಕಲ್ಯಾಣ: ನಗರದ ಪ್ರಸಿದ್ಧ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಮೂರು ದಿನಗಳ ಜಾತ್ರೆಯ ಪಲ್ಲಕ್ಕಿ ಉತ್ಸವ ಸಂಭ್ರಮ, ಭಕ್ತಿಭಾವದಿಂದ ನೆರವೇರಿತು.
ಹಾರಕೂಡ ಚನ್ನವೀರ ಶಿವಾಚಾರ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಐದು ನಂದಿಧ್ವಜಗಳಿಗೂ ಅವರು ಪೂಜೆ ಸಲ್ಲಿಸಿದರು.
ಬಳಿಕ ಬೆಳ್ಳಿ ಪಲ್ಲಕ್ಕಿ ಮತ್ತು ಬಸವಣ್ಣನವರ ಮೂರ್ತಿಯನ್ನು ಪುಷ್ಪಗಳಿಂದ ಸಿಂಗರಿಸಿದ ವಾಹನದಲ್ಲಿ ಇಟ್ಟು ಮೆರವಣಿಗೆ ಹೊರಡಲಾಯಿತು. ಕಾಳಿಗಲ್ಲಿ, ಐತಿಹಾಸಿಕ ಕೋಟೆ, ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.
30 ಅಡಿ ಎತ್ತರದ ಐದು ನಂದಿ ಧ್ವಜಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಪಂಚೆ ಹಾಗೂ ಅಂಗಿ ತೊಟ್ಟಿದ್ದ ತಲೆಗೆ ರುಮಾಲು ಕಟ್ಟಿಕೊಂಡಿದ್ದ ನೂರಾರು ಜನರು ಭಾಗವಹಿಸಿ ಸರತಿಯಂತೆ ನಂದಿಧ್ವಜಗಳನ್ನು ಹಿಡಿದು ಸಾಗಿದರು.
ಬ್ಯಾಂಡ್ ಬಾಜಾ, ಡೊಳ್ಳು, ಭಜನೆ ಹಾಗೂ ಇತರೆ ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಮುಖವಾಡ ಧರಿಸಿದ ವರು ಗಮನಸೆ ಳೆದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪ್ರಮುಖರಾದ ಮಲ್ಲಿಕಾರ್ಜುನ ಕುರಕೋಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ಈರಣ್ಣ ಹಲಶೆಟ್ಟೆ, ಬಸವರಾಜ ಕೋರಕೆ, ವಿವೇಕಾನಂದ ಹೊದಲೂರೆ, ಮಲ್ಲಿಕಾರ್ಜುನ ಚಿರಡೆ, ಸುನಿಲ ಹೊಳಕುಂದೆ, ಪುಷ್ಪಾವತಿ ಮಾಮಾ, ಡಾ.ಜಿ.ಎಸ್.ಭುರಳೆ, ನಾಗಯ್ಯ ಸ್ವಾಮಿ, ಮಲ್ಲಿನಾಥ ಮಂಠಾಳೆ, ಪ್ರದೀಪ ವಾತಡೆ, ವಿಜಯಕುಮಾರ ಮಂಠಾಳೆ, ಶರಣು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಮೆರವಣಿಗೆಗೆ ಚಾಲನೆ ನೀಡುವಾಗ ಕೆಲಕಾಲ ಮಳೆಯ ಸಿಂಚನವಾಯಿತು. ಆದ್ದರಿಂದ ಬಿಸಿಲಿನ ತಾಪ ಕಡಿಮೆಯಾಗಿ ಮೆರವಣಿಗೆ ನಡೆಸುವುದಕ್ಕೆ ಅನುಕೂಲ ಆಯಿತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-33-289597324

