Dailyhunt Logo
  • Light mode
    Follow system
    Dark mode
    • Play Story
    • App Story
Video | ಕೇಂದ್ರ ಬಜೆಟ್: ವಿತ್ತ ಸಚಿವೆಯ ಚಾರ್ಕೋಲ್ ಸ್ಕೆಚ್ ರಚಿಸಿದ ಕಲಾವಿದ

Video | ಕೇಂದ್ರ ಬಜೆಟ್: ವಿತ್ತ ಸಚಿವೆಯ ಚಾರ್ಕೋಲ್ ಸ್ಕೆಚ್ ರಚಿಸಿದ ಕಲಾವಿದ

ಮ್ರೋಹಾ (ಉತ್ತರ ಪ್ರದೇಶ): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಸತತ 9ನೇ ಬಾರಿಗೆ ಬಜೆಟ್‌ ಮಂಡಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇದರ ಸ್ಮರಣಾರ್ಥ, ಕಲಾವಿದ ಜುಹೈಬ್ ಖಾನ್ ಅವರು ಅದ್ಭುತವಾದ ಚಾರ್ಕೋಲ್ ಸ್ಕೆಚ್ (ಇದ್ದಿಲು ಚಿತ್ರಕಲೆ) ರಚಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರಿಂದ ಸತತ 9ನೇ ಬಜೆಟ್ ಮಂಡನೆ ಆಧರಿಸಿ ರಚಿಸಲಾದ ಈ ಕಲಾಕೃತಿಯು ಭಾರತದ ಆರ್ಥಿಕತೆ ಮತ್ತು ಆಡಳಿತದ ಸಾಂಕೇತಿಕ ಪ್ರಾತಿನಿಧ್ಯಗಳನ್ನು ಒಳಗೊಂಡಿದೆ.

ಆಕೃತಿಯ ಮಧ್ಯಭಾಗದಲ್ಲಿ ಸೀತಾರಾಮನ್ ಅವರ ಕಪ್ಪು-ಬಿಳುಪಿನ ಭಾವಚಿತ್ರವಿದೆ. ಅವರನ್ನು ಅವರ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಲಾಗಿದೆ. ಸಾಂಪ್ರದಾಯಿಕ ಸೀರೆಯನ್ನು ಉಟ್ಟು, ಕೆಂಪು ಬಣ್ಣದ ಟ್ಯಾಬ್ಲೆಟ್‌ ಹಿಡಿದಿದ್ದಾರೆ. ಪಕ್ಕದಲ್ಲಿ ಚಿನ್ನದ ಬಣ್ಣದ ರೂಪಾಯಿ ನಾಣ್ಯ, ರಕ್ಷಣಾ ಕ್ಷೇತ್ರದ ಗುರುರು (ಯುದ್ಧ ವಿಮಾನ), ನಗರ ಮೂಲಸೌಕರ್ಯ, ಕೃಷಿ ಮತ್ತು ಆರ್ಥಿಕ ಸೇರಿದಂತೆ ಭಾರತದ ಅಭಿವೃದ್ಧಿ ಆದ್ಯತೆಗಳ ಪ್ರಮುಖ ಅಂಶಗಳನ್ನು ಚಿತ್ರಿಸಲಾಗಿದೆ.

‌ಕೇಂದ್ರ ಬಜೆಟ್ 2026-27: ಸವಾಲುಗಳೇನು?

Dailyhunt
Disclaimer: This content has not been generated, created or edited by Dailyhunt. Publisher: Prajavani