ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಜ್ವರ ಈಗ ಜಗತ್ತಿನ ಬಹುಭಾಗವನ್ನು ಆವರಿಸಿದೆ. ಬೆಂಗಳೂರಿನ ಗಲ್ಲಿಗಳಿಗೂ ಅದು ಹಬ್ಬಿದೆ. ಲಯೊನೆಲ್ ಮೆಸ್ಸಿಯ ಕಾಲ್ಚಳಕದ ಮ್ಯಾಜಿಕ್ ಮತ್ತು ಯುವತಾರೆ ಲಮೆನ್ ಯಮಾಲ್ ಅವರ ಚುರುಕಾದ ಆಟವನ್ನು ನೋಡಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ.
ಇವರಿಬ್ಬರೂ ಭಾನುವಾರ ತಡರಾತ್ರಿ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಕುರಿತು 'ಪ್ರಜಾವಾಣಿ' ಸಂವಾದದಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರ್ತಿ ಅಮೂಲ್ಯ ಕಮಲ್ ಮತ್ತು ಗಿರೀಶ ದೊಡ್ಡಮನಿ ಅವರ ಮಾತುಕತೆ ಇಲ್ಲಿದೆ...

