ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ವಿಧಾನಸೌಧದಲ್ಲಿ ಫ್ರೀಡಂ ಹಬ್ಬ: ಮನೆಯಿಂದ ಹೊರಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..
ಒಂದು ಸಾಲಿನಲ್ಲಿಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ 'ಫ್ರೀಡಂ ಹಬ್ಬ'ಕ್ಕೆ ಸಾರ್ವಜನಿಕರು ಭಾಗವಹಿಸಲು ಅಗತ್ಯವಿರುವ ಸಿದ್ಧತೆ ಮತ್ತು ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ.
ಏನು? ಏಕೆ? ಹೇಗೆ?
ಫ್ರೀಡಂ ಹಬ್ಬ ಕಾರ್ಯಕ್ರಮಕ್ಕೆ ಹೋಗಲು ನೋಂದಣಿ ಅಗತ್ಯವಿದೆಯೇ?
ಹೌದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 18 ಸಾವಿರಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೋಂದಣಿ ಕಡ್ಡಾಯವಲ್ಲ.
ಕಾರ್ಯಕ್ರಮಕ್ಕೆ ಪ್ರವೇಶಿಸಲು ಯಾವ ದಾಖಲೆ ಕಡ್ಡಾಯವಾಗಿದೆ?
ವಿಧಾನಸೌಧದ ಆವರಣಕ್ಕೆ ಪ್ರವೇಶ ಪಡೆಯಲು ಪ್ರತಿಯೊಬ್ಬ ಸಂದರ್ಶಕರು ಮಾನ್ಯವಾದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.
ವಾಹನಗಳನ್ನು ಎಲ್ಲಿ ನಿಲುಗಡೆ ಮಾಡಬೇಕು?
ಸಾರ್ವಜನಿಕರ ವಾಹನಗಳ ನಿಲುಗಡೆಗಾಗಿ ಕಂಠೀರವ ಕ್ರೀಡಾಂಗಣ, ಸ್ವಾತಂತ್ರ್ಯ ಉದ್ಯಾನ, ಯುಬಿ ಸಿಟಿ, ಶಿವಾಜಿನಗರ ಎಂಎಲ್‌ಸಿಪಿ ಪಾರ್ಕಿಂಗ್ ಮತ್ತು ಸರ್ಕಾರಿ ಕಲಾ ಕಾಲೇಜಿನಂತಹ ಪ್ರಮುಖ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ಮೆಟ್ರೊ ನಿಲ್ದಾಣದ ಸೇವೆಯಲ್ಲಿ ಏನಾದರೂ ಬದಲಾವಣೆಗಳಿವೆಯೇ?
ಹೌದು, ವಿಧಾನಸೌಧ ಮೆಟ್ರೊ ನಿಲ್ದಾಣದ ಪ್ರವೇಶ/ನಿರ್ಗಮನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸಾರ್ವಜನಿಕರು ಕಬ್ಬನ್ ಪಾರ್ಕ್ ಅಥವಾ ವಿಶ್ವೇಶ್ವರಯ್ಯ (ಸೆಂಟ್ರಲ್ ಕಾಲೇಜು) ನಿಲ್ದಾಣಗಳನ್ನು ಬಳಸಬೇಕು.
ಕಾರ್ಯಕ್ರಮದ ಸ್ಥಳದಲ್ಲಿ ಸಾರ್ವಜನಿಕರಿಗೆ ಇರುವ ಸೌಲಭ್ಯಗಳೇನು?
ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಕುಡಿಯುವ ನೀರು ಮತ್ತು ಒಟ್ಟು 80 ಜೈವಿಕ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪ್ರಮುಖ ಅಂಕಿಅಂಶಗಳು
18,000ನೋಂದಾಯಿತರ ಸಂಖ್ಯೆ80ಒಟ್ಟು ಜೈವಿಕ ಶೌಚಾಲಯಗಳು18ಪ್ರವೇಶ ದ್ವಾರಗಳ ಸಂಖ್ಯೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಬೆಂಗಳೂರು: ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ವಿಧಾನ ಸೌಧದ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಇದೇ ಮೊದಲ ಬಾರಿಗೆ 'ಫ್ರೀಡಂ ಹಬ್ಬ' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ, 18 ಸಾವಿರಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಹಾಗಾಗಿ, ಈ ಕಾರ್ಯಕ್ರಮಕ್ಕೆ ಹೋಗುವ ಮೊದಲ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ.
ಸಾರ್ವಜನಿಕರಿಗೆ ಮಾಹಿತಿ
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಹಿರಿಯ ನಾಗರಿಕರು ಮತ್ತು ಅಂಗವಿಕಲ ವ್ಯಕ್ತಿಗಳ ಬಗ್ಗೆ ವಿಶೇಷ ಕಾಳಜಿ ಇರಲಿದೆ.
ವಿಧಾನಸೌಧಕ್ಕೆ ಪ್ರವೇಶಿಸಲು ಸಂದರ್ಶಕರು ಮಾನ್ಯವಾದ ಗುರುತಿನ ಚೀಟಿ ಹೊಂದಿರಬೇಕು. ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶಕ್ಕೆ ಅನುಮತಿ ಇಲ್ಲ.
ವಿಧಾನಸೌಧ ಆವರಣದಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರು ವಿವಿಧ ಸ್ಥಳಗಳಿಂದ ಕಾರ್ಯಕ್ರಮ ವೀಕ್ಷಿಸಬಹುದು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಒಟ್ಟು 80 ಜೈವಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 30 ವಿಧಾನಸೌಧದ ಒಳಗೆ ಮತ್ತು 50 ಹೊರಗೆ ಇರುತ್ತವೆ.
ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವಿತರಣಾ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.
ಕಾರ್ಯಕಾರ್ಯಕ್ರಮಕ್ಕೆ ಪ್ರವೇಶ ಮತ್ತು ನಿರ್ಗಮನ ಜಿಪಿಒ ವೃತ್ತ, ಕೆಆರ್ ವೃತ್ತ ಮತ್ತು ಕಬ್ಬನ್ ಪಾರ್ಕ್ (ಹೈಕೋರ್ಟ್ ಗೇಟ್) ಮಾರ್ಗಗಳ ಮೂಲಕ ಮಾತ್ರ ಇರುತ್ತದೆ.
ಒಟ್ಟು 18 ಪ್ರವೇಶ ದ್ವಾರಗಳನ್ನು ಸ್ಥಾಪಿಸಲಾಗಿದೆ.
ಸ್ವಯಂಸೇವಕರು ಗೊತ್ತುಪಡಿಸಿದ ಟಿ-ಶರ್ಟ್‌ಗಳಿಂದ ಗುರುತಿಸಬಹುದು, ಅವರು ವಿವಿಧ ಸ್ಥಳಗಳಲ್ಲಿ ಇರಲಿದ್ದಾರೆ.

ವಾಹನ ನಿಲುಗಡೆ ಸ್ಥಳಗಳು
ಸ್ಕೌಟ್ಸ್ ಹಾಗೂ ಗೈಡ್ಸ್ ಪಾರ್ಕಿಂಗ್ ಸ್ಥಳ
ಸ್ವಾತಂತ್ರ್ಯ ಉದ್ಯಾನದ ಎಂಎಲ್‌ಸಿಪಿ ಪಾರ್ಕಿಂಗ್ ಸ್ಥಳ
ಕಂಠೀರವ ಕ್ರೀಡಾಂಗಣ
ಯೂನಿವರ್ಸಿಟಿ ಪಾರ್ಕಿಂಗ್ (ಜ್ಞಾನಜ್ಯೋತಿ ಆಡಿಟೋರಿಯಂ ) ಬಳಿ
ಸರ್ಕಾರಿ ಕಲಾ ಕಾಲೇಜು ಪಾರ್ಕಿಂಗ್ ಸ್ಥಳ
ಯುಬಿ ಸಿಟಿ ಪಾರ್ಕಿಂಗ್ ಸ್ಥಳ
ಶಿವಾಜಿನಗರದ ಎಂಎಲ್‌ಸಿಪಿ ಪಾರ್ಕಿಂಗ್ ಸ್ಥಳ
ನೆಹರೂ ತಾರಾಲಯ
ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನ
ಲಿಂಕ್ ರಸ್ತೆ (ಚಿನ್ನಸ್ವಾಮಿ ಕ್ರೀಡಾಂಗಣ)
ವಿಧಾನಸೌಧ ಮೆಟ್ರೊ ತಾತ್ಕಾಲಿಕ ಸ್ಥಗಿತ
ವಿಧಾನಸೌಧ ಮೆಟ್ರೊ ನಿಲ್ದಾಣದಲ್ಲಿ (ಅಂಬೇಡ್ಕರ್ ಮೆಟ್ರೊ ನಿಲ್ದಾಣ) ಪ್ರವೇಶ/ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೆಟ್ರೊ ಮೂಲಕ ವಿಧಾನಸೌಧದ ಬಳಿ ನಡೆಯುವ ಸ್ವಾತಂತ್ರ್ಯ ಹಬ್ಬಕ್ಕೆ ಬರುವ ಸಾರ್ವಜನಿಕರು ಕಬ್ಬನ್ ಪಾರ್ಕ್ ಮೆಟ್ರೊ ಮತ್ತು ವಿಶ್ವೇಶ್ವರಯ್ಯ ಮೆಟ್ರೊ (ಸೆಂಟ್ರಲ್ ಕಾಲೇಜು) ನಿಲ್ದಾಣಗಳನ್ನು ಪ್ರವೇಶ ಹಾಗೂ ನಿರ್ಗಮನಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಎಲ್ಲೆಲ್ಲಿ ಸಂಚಾರ ನಿರ್ಬಂಧ:
ಅಂಬೇಡ್ಕರ್ ರಸ್ತೆಯ ಮೂಲಕ ಕೆ.ಆರ್.ವೃತ್ತದ ಕಡೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಶೇಷಾದ್ರಿ ರಸ್ತೆಯ ಕೆ.ಆರ್.ವೃತ್ತದಿಂದ ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ, ವಸಂತನಗರದ ಕಡೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ (ಅಂಬೇಡ್ಕರ್ ರಸ್ತೆಯ ಕೆ.ಆರ್ ವೃತ್ತದ ಕಡೆಗೆ ಸಂಚ ರಿಸುವ ವಾಹನಗಳು)
ಸಂಚಾರ ಮಾರ್ಗ ಬದಲು
ಬಾಳೆಕುಂದ್ರಿ ಜಂಕ್ಷನ್‌ನಿಂದ ಕನ್ನಿಂಗ್ ಹ್ಯಾಂ ರಸ್ತೆಯ ಮೂಲಕ ಚಂದ್ರಿಕಾ ವೃತ್ತದಲ್ಲಿ ಎಡಕ್ಕೆ ತಿರುವು ಪಡೆದು ಎಲ್‌ಆರ್‌ಡಿಇ, ಬಸವೇಶ್ವರ ಜಂಕ್ಷನ್ -ಪ್ಯಾಲೇಸ್ ರಸ್ತೆಯ ಮೂಲಕ ಕೆ.ಆರ್ ವೃತ್ತದ ಕಡೆಗೆ ಸಂಚರಿಸಬಹುದು.
ಬಾಳೆಕುಂದ್ರಿ ಜಂಕ್ಷನ್‌ನಿಂದ ಸಿಟಿಒ, ಕ್ವಿನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್‌ಆರ್‌ಎಂಆರ್ ಕಾರ್ಪೊರೇಷನ್ ವೃತ್ತದ ಮೂಲಕ ಸಂಚರಿಸಬಹುದು.
ಬಿಆರ್‌ವಿ, ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ಕ್ಲೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ-ಆರ್‌ಆರ್‌ಎಂಆರ್. ಕಾರ್ಪೊರೇಷನ್ ವೃತ್ತದ ಮೂಲಕ ಸಂಚರಿಸಬಹುದು.
ಶೇಷಾದ್ರಿ ರಸ್ತೆಯ ಕೆ.ಆರ್ ವೃತ್ತದಿಂದ ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ, ವಸಂತನಗರ ಕಡೆಗೆ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ.
ಮಹಾರಾಣಿ ಮೇಲೆತುವೆ ಬಳಿ ಎಡಕ್ಕೆ ತಿರುವು ಪಡೆದು ಪ್ಯಾಲೇಸ್ ರಸ್ತೆಯ ಬಸವೇಶ್ವರ ವೃತ್ತದ ಮೂಲಕ ವಸಂತನಗರ, ಶಿವಾಜಿನಗರದ ಕಡೆಗೆ ಸಂಚರಿಸಬಹುದು.
ಕೆ.ಆರ್ ವೃತ್ತದಿಂದ ನೃಪತುಂಗ ರಸ್ತೆಯ ಮೂಲಕ ಕಾರ್ಪೊರೇಷನ್ ವೃತ್ತ, ಕೆ.ಬಿ ರಸ್ತೆಯ ಮೂಲಕ ಶಿವಾಜಿನಗರದ ಕಡೆಗೆ ಸಂಚರಿಸಬಹುದು

