Dailyhunt Logo
  • Light mode
    Follow system
    Dark mode
    • Play Story
    • App Story
ವಿಡಿಯೊ | ಶ್ರೀಗಂಧ ಕಳ್ಳರಿಗೆ ಸಿಮೆಂಟ್‌ ಕೋಟೆ!: ಕುಣಿಗಲ್‌ ರೈತನ ಹೊಸ ಐಡಿಯಾ

ವಿಡಿಯೊ | ಶ್ರೀಗಂಧ ಕಳ್ಳರಿಗೆ ಸಿಮೆಂಟ್‌ ಕೋಟೆ!: ಕುಣಿಗಲ್‌ ರೈತನ ಹೊಸ ಐಡಿಯಾ

ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಕೂತಾರಹಳ್ಳಿ ಗ್ರಾಮದ ಯುವ ರೈತ ವಿನೋದ್‌ ಗೌಡ, ಶ್ರೀಗಂಧ ಮರಗಳನ್ನು ಕಳ್ಳರಿಂದ ರಕ್ಷಿಸಲು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. 34 ಶ್ರೀಗಂಧ ಮರಗಳ ಸುತ್ತ ಎಂಟು ಅಡಿ ಎತ್ತರದ ಸಿಮೆಂಟ್‌ ಕಾಂಕ್ರೀಟ್‌ ರಿಂಗ್‌ ನಿರ್ಮಿಸಿ ಸುಮಾರು ₹2.38 ಲಕ್ಷ ವೆಚ್ಚ ಮಾಡಿದ್ದಾರೆ.

ಬೇರುಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿರುವ ಅವರು, ಸಾವಯವ ಕೃಷಿ ಮತ್ತು ಕಾಡು ಕೃಷಿಯ ಮೂಲಕ ಪರಿಸರ ಸಂರಕ್ಷಣೆಯಲ್ಲೂ ಮಾದರಿಯಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani