ಶಿವಮೊಗ್ಗ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ 16 ವರ್ಷದೊಳಗಿನವರ ಪ್ರತಿಷ್ಠಿತ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಪ್ರಕಟಿಸಿರುವ ಆಟಗಾರರ ಪಟ್ಟಿಯಲ್ಲಿ ಶಿವಮೊಗ್ಗ ವಲಯದಿಂದ ಆಯ್ಕೆಯಾಗಿರುವ ಆಯುಷ್ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶದ ಲಖನೌದಲ್ಲಿ ನ.
14ರಿಂದ ಡಿ. 8ರವರೆಗೆ ಟೂರ್ನಿ ನಡೆಯಲಿದೆ. ಪತ್ರಕರ್ತ ವೈ.ಕೆ. ಸೂರ್ಯ ನಾರಾಯಣ ಹಾಗೂ ಶಿಕ್ಷಕಿ ವತ್ಸಲಾ ದಂಪತಿಯ ಪುತ್ರ ಆಯುಷ್, ನಗರದ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿ ಓದುತ್ತಿದ್ದು, ಸದ್ಯ ಶಿವಮೊಗ್ಗದ ಡೈಮಂಡ್ ಕ್ರಿಕೆಟ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
261104-42-2088290847

