ವಿಜಯಪುರ: ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಸೋಮವಾರ ಸಂಜೆ ಹಾವು ಕಚ್ಚಿ ರೈತ ಮಹಿಳೆ ಸವಿತಾ ಸಾಯಬಣ್ಣ ಬರಮಣ್ಣ (32) ಸಾವಿಗೀಡಾಗಿದ್ದಾರೆ.
ಹೊಲದಲ್ಲಿ ಹಸುಗಳಿಗೆ ಮೇವು ತರಲು ಹೋದಾಗ ಹಾವು ಕಚ್ಚಿದ್ದರಿಂದ ವಿಜಯಪುರದ ಬಿಎಲ್‌ಡಿಎ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾರೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

