Dailyhunt Logo
  • Light mode
    Follow system
    Dark mode
    • Play Story
    • App Story
ವಿರಾಜಪೇಟೆಯಲ್ಲಿ ಸೆ.6ರಂದು ಓಣಂ ಆಚರಣೆ: ವಿವಿಧ ಸ್ಪರ್ಧೆ

ವಿರಾಜಪೇಟೆಯಲ್ಲಿ ಸೆ.6ರಂದು ಓಣಂ ಆಚರಣೆ: ವಿವಿಧ ಸ್ಪರ್ಧೆ

ವಿರಾಜಪೇಟೆ: ಪಟ್ಟಣದ ಮೀನುಪೇಟೆಯ ಮುತ್ತಪ್ಪ ಮಲಯಾಳಿ ಸಮಾಜದಿಂದ 18ನೇ ವರ್ಷದ ಓಣಂ ಆಚರಣೆಯನ್ನು ಸೆ. 6 ರಂದು ಚೈತನ್ಯ ಮಠಪುರ ಮುತ್ತಪ್ಪ ಕಲಾಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 8.30ಕ್ಕೆ ಮಹಾಬಲಿಯನ್ನು ಬರಮಾಡಿಕೊಂಡು, ಮುತ್ತಪ್ಪ ಸನ್ನಿಧಿಯಲ್ಲಿ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಬಳಿಕ ಮುತ್ತಪ್ಪ ದೇವಾಲಯದಿಂದ 9.30ಕ್ಕೆ ಮಹಾಬಲಿಯ ಮೆರವಣಿಗೆ ಪ್ರಾರಂಭ ಆಗಲಿದೆ. ಹೂವಿನ ರಂಗೋಲಿ ಸ್ಪರ್ಧೆ ಬೆಳಿಗ್ಗೆ 9 ರಿಂದ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಸಾಂಪ್ರದಾಯಿಕ ಓಣಂ ಭೋಜನ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಧ್ಯಾಹ್ನ 2ಕ್ಕೆ ನಡೆಯಲಿರುವ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ತಿರುವಾದಿರೆ ನೃತ್ಯದೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ರಿಂದ ಉಚಿತ ಕೂಪನ್ ಡ್ರಾ ಹಾಗೂ ಸಂಜೆ 6 ಗಂಟೆಗೆ ಓಣಂ ಸಹಾಯಾರ್ಥ ಕೂಪನ್ ಡ್ರಾ ನೆರವೇರಲಿದೆ. ರಂಗೋಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಮಾಹಿತಿಗಾಗಿ 90351 97151 ಅಥವಾ 97312 58197 ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-51-1838250840

Dailyhunt
Disclaimer: This content has not been generated, created or edited by Dailyhunt. Publisher: Prajavani