ಜನವಾಡ: ಬೀದರ್ ತಾಲ್ಲೂಕಿನ ಗುನ್ನಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ಮಂದಿರದ 13ನೇ ಜಾತ್ರೆ ಏ.18 ರಿಂದ 20ರವರೆಗೆ ಜರುಗಲಿದೆ. 'ಅಂದು ಸಂಜೆ 7ಕ್ಕೆ ದೇವಸ್ಥಾನದ ಆವರಣದಲ್ಲಿ ಜಾತ್ರೆ ಉದ್ಘಾಟನೆ ಹಾಗೂ ಧರ್ಮಸಭೆ ನಡೆಯಲಿದೆ. ಸಂಸದ ಸಾಗರ್ ಖಂಡ್ರೆ ಜಾತ್ರೆಗೆ ಚಾಲನೆ ನೀಡಲಿದ್ದಾರೆ' ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಸುನೀಲಕುಮಾರ ನಾಗಶೆಟ್ಟೆಪ್ಪ ಬಿರಾದಾರ ತಿಳಿಸಿದ್ದಾರೆ.
ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಬಸವಲಿಂಗ ಅವಧೂತರು ಸಾನ್ನಿಧ್ಯ, ಲಾಡಗೇರಿ ಮಠದ ಗಂಗಾಧರ ಶಿವಾಚಾರ್ಯ, ಖಟಕಚಿಂಚೋಳಿಯ ಬಸವಲಿಂಗ ದೇವರು ಸಮ್ಮುಖ ವಹಿಸಲಿದ್ದಾರೆ. 20 ರಂದು ಸಂಜೆ 6.01ಕ್ಕೆ ರಥೋತ್ಸವ, ರಾತ್ರಿ 8ಕ್ಕೆ ಭಜನೆ ಜರುಗಲಿದೆ ಎಂದು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-33-560637625
