Dailyhunt Logo
  • Light mode
    Follow system
    Dark mode
    • Play Story
    • App Story
ವೀಸಾ | ವಲಸೆ, ವಿದೇಶಿಗರ ನಿಯಮಗಳ ಬದಲಾವಣೆ

ವೀಸಾ | ವಲಸೆ, ವಿದೇಶಿಗರ ನಿಯಮಗಳ ಬದಲಾವಣೆ

ವದೆಹಲಿ: ಭಾರತಕ್ಕೆ 180 ದಿನಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ವೀಸಾ ಪಡೆಯುವ ವಿದೇಶಿಗರು ಅವಧಿ ವಿಸ್ತರಿಸಿಕೊಳ್ಳಬೇಕು ಎಂಬುದಾದರೆ, 180 ದಿನಗಳು ಪೂರ್ಣಗೊಳ್ಳುವ ಮೊದಲೇ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಹೊಸ ನಿಯಮ ರೂಪಿಸಿದೆ.

ವಲಸೆ ಮತ್ತು ವಿದೇಶಿಗರ ನಿಯಮಗಳು-2025ಕ್ಕೆ ತಿದ್ದುಪಡಿ ತಂದು, ಕೇಂದ್ರ ಗೃಹ ಸಚಿವಾಲಯವು ಸೋಮವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. 180 ದಿನಗಳ ಅವಧಿ ಪೂರ್ಣಗೊಂಡ 14 ದಿನಗಳ ಒಳ ಗಾಗಿ ನೋಂದಣಿ ಅಧಿಕಾರಿಗೆ ಮಾಹಿತಿ ನೀಡಬೇಕು ಎಂಬುದು ಹಳೇ ನಿಯಮವಾಗಿತ್ತು. ತೀರಾ ಅಗತ್ಯ ಸಂದ ರ್ಭಗಳಲ್ಲಿ ಮಾತ್ರವೇ ವಿದೇಶಿಗರ ವೀಸಾ ಅವಧಿಯನ್ನು ವಿಸ್ತರಿಸಬಹುದು ಎಂದು ಹೊಸ ನಿಯಮಗಳಲ್ಲಿದೆ.

ಪೋಷಕರಲ್ಲಿ ಒಬ್ಬರು ಭಾರತೀಯರಾಗಿದ್ದು,ತಮಗೆ ಹುಟ್ಟುವ ಮಕ್ಕಳಿಗೆ ಭಾರತದ ಪೌರತ್ವ ಪಡೆದುಕೊಳ್ಳಬೇಕಿದ್ದರೆ ಅಥವಾ ಪೌರತ್ವ ವಾಪಸು ಮಾಡಬೇಕಿದ್ದರೆ ಅಂಥವರು ಮಗುವಿನ ಜನನದ 30 ದಿನಗಳ ಒಳಗಾಗಿ ನೋಂದಣಿ ಅಧಿಕಾರಿಗೆ ಮಾಹಿತಿ ನೀಡಬೇಕಿತ್ತು.

ಈಗ ಈ ನಿಯಮವನ್ನು ಸರಳಗೊಳಿಸಲಾಗಿದೆ. ಈಗ ಪೌರತ್ವ ವಾಪಸು ಪಡೆದುಕೊಳ್ಳುವಾಗ ಮಾತ್ರವೇ ಮಾಹಿತಿ ನೀಡಿದರೆ ಸಾಕು. ಮಗು ಭಾರತದಲ್ಲಿ ಇರುವಾಗಲೇ ಬೇರೆ ದೇಶದ ಪೌರತ್ವ ಪಡೆದುಕೊಂಡರೆ, 30 ದಿನಗಳ ಒಳಗೆ ನೋಂದಣಿ ಅಧಿಕಾರಿಗಳಿಗೆ ಪೋಷಕರು ಮಾಹಿತಿ ನೀಡಬೇಕು ಎಂಬ ಅಂಶ ಹೊಸ ನಿಯಮಗಳಲ್ಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-430519158

Dailyhunt
Disclaimer: This content has not been generated, created or edited by Dailyhunt. Publisher: Prajavani