Dailyhunt
ವೋಲ್ವೊ: ಎರಡು ಹೊಸ ಮಾದರಿ ಕಾರು ಬಿಡುಗಡೆ

ವೋಲ್ವೊ: ಎರಡು ಹೊಸ ಮಾದರಿ ಕಾರು ಬಿಡುಗಡೆ

ಬೆಂಗಳೂರು: ಐಷಾರಾಮಿ ಕಾರು ತಯಾರಿಕಾ ಕಂಪನಿ ವೋಲ್ವೊ, ಎರಡು ಹೊಸ ಮಾದರಿಗಳನ್ನು ಶುಕ್ರವಾರ ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡೂ ಕಾರುಗಳಲ್ಲಿ ತುಸು ಹೈಬ್ರಿಡ್ ಆಗಿರುವ ಪೆಟ್ರೋಲ್ ಎಂಜಿನ್ ಅಳವಡಿಸಿರುವುದು ವಿಶೇಷ.

ಎಸ್‌90 ಮತ್ತು ಎಕ್ಸ್‌ಸಿ60 ಶುಕ್ರವಾರ ಬಿಡುಗಡೆ ಆದ ಕಾರಿನ ಮಾದರಿಗಳು.

ಎಸ್‌90 ಕಾರಿನ ಎಕ್ಸ್‌ ಷೋರೂಂ ಬೆಲೆ ₹ 61.90 ಲಕ್ಷ. ಎಕ್ಸ್‌ಸಿ60 ಕಾರಿನ ಬೆಲೆ ಕೂಡ ಇಷ್ಟೇ ಆಗಿದೆ.

₹ 75 ಸಾವಿರ ಪಾವತಿಸಿ ಮೂರು ವರ್ಷಗಳ ಅವಧಿಯ ವೋಲ್ವೊ ಸರ್ವಿಸ್‌ ಪ್ಯಾಕೇಜ್ ಪಡೆಯಬಹುದು ಎಂದು ಕಂಪನಿ ಹೇಳಿದೆ. ಹೊಸದಾಗಿ ಬಿಡುಗಡೆ ಆಗಿರುವ ಕಾರು ಖರೀದಿಸುವಾದಲೇ ಈ ಪ್ಯಾಕೇಜ್‌ ಕೂಡ ಖರೀದಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani