Dailyhunt Logo
  • Light mode
    Follow system
    Dark mode
    • Play Story
    • App Story
ವ್ಯಾಪಾರ ಒಪ್ಪಂದ ವಿಫಲ: ಕೆನಡಾ ಸರಕುಗಳ ಮೇಲೆ ಅಮೆರಿಕದಿಂದ ಶೇ 50ರಷ್ಟು ಸುಂಕ

ವ್ಯಾಪಾರ ಒಪ್ಪಂದ ವಿಫಲ: ಕೆನಡಾ ಸರಕುಗಳ ಮೇಲೆ ಅಮೆರಿಕದಿಂದ ಶೇ 50ರಷ್ಟು ಸುಂಕ

ವಾಷಿಂಗ್ಟನ್: ವ್ಯಾಪಾರ ಒಪ್ಪಂದದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ, ಕೆನಡಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದೆ.

ಸುಮಾರು 20 ಬಿಲಿಯನ್ ಡಾಲರ್‌ ಮೌಲ್ಯದ ಕೆನಡಾ ಸರಕುಗಳು ಹೊಸ ಸುಂಕದ ವ್ಯಾಪ್ತಿಗೆ ಬರಲಿದ್ದು, ಅಮೆರಿಕಕ್ಕೆ ಕೆನಡಾ ರಫ್ತು ಮಾಡುವ ಒಟ್ಟು ಸರಕುಗಳ ಪೈಕಿ ಶೇ 5ರಷ್ಟು ಇದರ ಪರಿಣಾಮಕ್ಕೆ ಒಳಗಾಗಲಿದೆ ಎಂದು ವರದಿಯಾಗಿದೆ.

ಶುಕ್ರವಾರ ತಡರಾತ್ರಿವರೆಗೂ ಉಭಯ ದೇಶಗಳ ಅಧಿಕಾರಿಗಳು ವ್ಯಾಪಾರ ಒಪ್ಪಂದಕ್ಕೆ ಬರಲು ಮಾತುಕತೆ ನಡೆಸಿದರು. ಆದರೆ, ಅಂತಿಮ ಒಪ್ಪಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಶನಿವಾರದಿಂದ ಹೊಸ ಸುಂಕ ಜಾರಿಗೆ ಬಂದಿದೆ.

ಬುಧವಾರದಿಂದಲೇ ಸುಂಕ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಮಾತುಕತೆಗೆ ಅವಕಾಶ ನೀಡುವ ಸಲುವಾಗಿ ಮೂರು ದಿನ ಮುಂದೂಡಲಾಗಿತ್ತು. ಆದರೆ, ಈ ಅವಧಿಯಲ್ಲೂ ಒಪ್ಪಂದ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಅಮೆರಿಕ ಸುಂಕ ಜಾರಿಗೊಳಿಸಿದೆ.

ಹಾಕಿ ಸ್ಟಿಕ್‌, ಸಿಮೆಂಟ್‌, ಕೈಗಾರಿಕಾ ಉಪಕರಣಗಳು, ಎಲೆಕ್ಟ್ರಾನಿಕ್ಸ್‌ ಮತ್ತು ಹಾಲಿನ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಇದರ ಪರಿಣಾಮ ಬೀರಲಿದೆ. ವೈದ್ಯಕೀಯ ಬಳಕೆಯ ಟಂಗ್‌ ಡಿಪ್ರೆಸರ್‌ಗಳಿಗೂ ಹೊಸ ಸುಂಕ ಅನ್ವಯವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani