ಯಾದಗಿರಿ: ಸುರಪುರ ತಾಲ್ಲೂಕಿನ ಹದನೂರ ಸಮೀಪದಲ್ಲಿ ಲಾರಿವೊಂದು ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು, ₹14 ಲಕ್ಷ ಮೌಲ್ಯದ 580 ಮೂಟೆ ಸಕ್ಕರೆ ನೀರು ಪಾಲಾಗಿದೆ. ತೆಲಂಗಾಣ ಮೂಲದ ಲಾರಿ ಚಾಲಕ ಬಿ.ರವಿಚಂದ್ರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರದ ಸಕ್ಕರೆ ಕಾರ್ಖಾನೆಗಳಿಂದ ತೆಲಂಗಾಣದ ಹೈದರಾಬಾದ್‌ನ ಬಿಸ್ಕತ್ ಫ್ಯಾಕ್ಟರಿಗೆ ಲಾರಿಯಲ್ಲಿ ತಲಾ 50 ಕೆ.ಜಿ.ಯ 640 ಸಕ್ಕರೆ ಮೂಟೆಗಳನ್ನು ಸಾಗಿಸಲಾಗುತ್ತಿತ್ತು. ಹದನೂರ ಸಮೀಪದ ಸಿಂದಗಿ-ಶಹಾಪುರ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ಹಳ್ಳದಲ್ಲಿ ಉರುಳಿ ಬಿತ್ತು. 580 ಮೂಟೆಗಳಲ್ಲಿದ್ದ ಸಕ್ಕರೆಯು ನೀರಿನಲ್ಲಿ ಕರಗಿ ಹಾಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-30-1481377960

