ಯಳಂದೂರು: 'ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಅಂತರ್ಗತವಾಗಿ ಇರುತ್ತದೆ. ಇಂತಹ ಅಭಿಜಾತ ಕಲಾ ಪ್ರಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರ ಹೃದಯ ಗೆಲ್ಲಬಹುದು' ಎಂದು ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಜೈಗುರು ಹೇಳಿದರು.
ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಬುಧವಾರ ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಜಾನಪದ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಜನಪದ ಕಲಾವಿದರಾದ ಮಹೇಶ್, ರಂಗಯ್ಯ, ಮಾದೇವಮ್ಮ, ಗಾಯಕ ಪುಟ್ಟಣ್ಣ ಮತ್ತು ಎನ್ ಮಹದೇವಸ್ವಾಮಿ ಕಾರ್ಯಕ್ರಮದಲ್ಲಿ ಹಾಡಿದರು.
ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ರುದ್ರಯ್ಯ, ಜೆ.ಶ್ರೀನಿವಾಸ್, ಕಲಾವಿದರ ಸಂಘದ ಅಧ್ಯಕ್ಷ ಮದ್ದೂರು ಚಕ್ರವರ್ತಿ, ಸಿ.ಸುಂದರ್, ಮರಿಸ್ವಾಮಿ ನಾರಾಯಣಸ್ವಾಮಿ, ಕಲೆ ನಟರಾಜು, ರತ್ನಕುಮಾರಿ, ಶಿವಶಂಕರ, ಬಸವರಾಜು, ರಾಜಮ್ಮ, ಶಿವಯ್ಯ, ಮಹೇಶ್, ರಾಜೇಶ್ವರಿ ಹಾಗೂ ಗ್ರಾಮಸ್ಥರು, ಶಿಕ್ಷಕರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-37-1302160308

