ಜೂನ್4 ರಂದು ಬಿಡುಗಡೆಯಾಗಬೇಕಿದ್ದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರವನ್ನು ಮತ್ತೆ ಮುಂದೂಡಲಾಗಿದೆ ಎಂದು ನಟ ಯಶ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ.
ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, 'ನಾವು ಕೆಲವು ಸಿನಿಮಾಗಳನ್ನು ಸುಮ್ಮನೆ ನೋಡುತ್ತೇವೆ.
ಆದರೆ ಇನ್ನೂ ಕೆಲವು ಚಿತ್ರಗಳು ಚಿತ್ರರಂಗದ ಮೇಲಿನ ಪ್ರೀತಿಯನ್ನು ತೋರಿಸುತ್ತವೆ. ನಾವು ಇತ್ತಿಚೇಗೆ ಸಿನಿಮಾಕಾನ್ ಕಾರ್ಯಮದಲ್ಲಿ ಭಾಗಿಯಾಗಿ 'ಟಾಕ್ಸಿಕ್' ಚಿತ್ರದ ತುಣುಕಗಳನ್ನು ಪ್ರದರ್ಶಿಸಿದಾಗ ಅಲ್ಲಿ ದೊರೆಕಿದ ಪ್ರತಿಕ್ರಿಯೆಯು ನಮ್ಮ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಈ ಚಿತ್ರವು ಜಗತ್ತಿನಾದ್ಯಂತ ತಲುಪಲು ಅರ್ಹವಾಗಿದೆ ಎಂಬುದು ತಿಳಿಯಿತು' ಎಂದಿದ್ದಾರೆ.
ಭಾರತೀಯ ಚಿತ್ರರಂಗವು ತನ್ನದೇ ಆದ ಧ್ವನಿಯನ್ನು ಕಂಡುಕೊಂಡು, ಉತ್ತಮ ಭರವಸೆಯೊಂದಿಗೆ ಜಾಗತಿಕ ವೇದಿಕೆಯಲ್ಲಿ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಚಿತ್ರರಂಗದ ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಬ್ಬ ನಟ ಮತ್ತು ನಿರ್ಮಾಪಕನಾಗಿ, ಭಾರತೀಯ ಚಿತ್ರೋದ್ಯಮಕ್ಕೆ ಹಾಗೂ ನಿಮಗೆಲ್ಲರಿಗೂ ನನ್ನ ಪಾಲಿನ ಕೊಡುಗೆ ನೀಡಲು ಈ ಸಮಯವನ್ನು ಒಂದು ಅವಕಾಶವಾಗಿ ನೋಡುತ್ತಿದ್ದೇನೆ. ಈ ಸಿನಿಮಾ ಜಗತ್ತಿನಾದ್ಯಂತ ತಲುಪಿಸುವ ನಿಟ್ಟಿನಲ್ಲಿ ಸಮಯವನ್ನು ತೆಗೆದುಕೊಳ್ಳುವುದು ನನ್ನ ಉದ್ದೇಶವಾಗಿದೆ' ಎಂದಿದ್ದಾರೆ.
'ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ಹಾಗೂ ಬದಲಾವಣೆಯಗೆ ನಿಮ್ಮ ಬೆಂಬಲ ನನಗೆ ಅಗತ್ಯ ಎಂದು ಮನವಿ ಮಾಡುತ್ತಿದ್ದೇನೆ. ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ. ಕೆಲವು ಪಯಣಗಳಿಗೆ ಅದರ ಅಗತ್ಯವಿರುತ್ತದೆ. ನೀವು ಸಂಭ್ರಮಿಸುವಂತಹ ಮತ್ತು ಆನಂದಿಸುವಂತಹ ಚಿತ್ರವನ್ನು ನೀಡುತ್ತೇವೆ ಎಂಬ ಭರವಸೆಯನ್ನು ನಾವು ನೀಡುತ್ತೇವೆ. ಇದು ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ಸಿನಿಮಾವಾಗಿ ನಿಲ್ಲಲಿದೆ' ಎಂದು ಹೇಳಿದ್ದಾರೆ.
ಚಿತ್ರತಂಡವು ಈ ಸಿನಿಮಾವನ್ನು ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ನಂತರ, ಜೂನ್ 4ಕ್ಕೆ ಮೂಂದೂಡಲಾಗಿತ್ತು. ಈಗ ಮತ್ತೊಮ್ಮೆ ದಿನಾಂಕ ಮುಂದೂಡಿದ್ದು, ಬಿಡುಗಡೆಯ ದಿನಾಂಕ ಘೋಷಣೆಯಾಗಿಲ್ಲ.

